ತ್ರಾಸಿಯ ಶ್ರೀ ರಾಮ ಮಂದಿರ ಬಳಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಿತು.
ಕುಂದಾಪುರ: ಮನೆಯಲ್ಲಿ ಕಟ್ಟಿದ ಗೋವುಗಳನ್ನು ನಿರ್ಭೀತಿಯಿಂದ ಕಳವು ಮಾಡಿ ವಧೆ ಮಾಡಲಾಗುತ್ತಿದೆ. ಊರಿನ ದಲ್ಲಾಳಿಗಳ ಕೈವಾಡದಿಂದ ಗೋ ಕಳ್ಳತನ ನಡೆಯುತ್ತಿದೆ. ಪೊಲೀಸ್ ಇಲಾಖೆ ವೈಫಲ್ಯವೋ ಅಥವಾ ನಮ್ಮೊಳಗೊನ ಒಗ್ಗಟ್ಟಿನ ಕೊರತೆಯಿಂದಲೋ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋವಿನಿಂದ ವಿವಿಧ ಉತ್ಪನ್ನಗಳು ನಮ್ಮ ಆರೋಗ್ಯ ರಕ್ಷಣೆಗೆ ಉಪಯುಕ್ತವಾಗಿದ್ದರೂ ಗೋ ರಕ್ಷಣೆಗೆ ನಾವೆಲ್ಲರೂ ಹಿಂದೇಟು ಹಾಕುತ್ತಿದ್ದೇವೆ. ಗೋ ಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆ. ಗೋ ರಕ್ಷಣೆ ಬಗ್ಗೆ ನಾವು ಜಾಗೃತರಾಗಬೇಕು ಎಂದು ವಾಗ್ಮಿ ಕವಿತಾ ಮುದ್ದೂರು ಹೇಳಿದರು.
ವಿಶ್ವ ಹಿಂದು ಪರಿಷತ್ ಬಜರಂಗ ದಳ, ಮಾತೃಶಕ್ತಿ ದುರ್ಗವಾಹಿನಿ ಬೈಂದೂರು ಪ್ರಖಂಡ ವತಿಯಿಂದ ತ್ರಾಸಿಯ ಶ್ರೀ ರಾಮ ಮಂದಿರ ಬಳಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಎಸೆನ್ನೆಲ್ ನಿವೃತ್ತ ಅಧಿಕಾರಿ ಭಾಸ್ಕರ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದ ಎದುರುಗಡೆಯಿಂದ ತ್ರಾಸಿ ಶ್ರೀ ರಾಮ ಮಂದಿರದ ತನಕ ಶೋಭಾಯಾತ್ರೆ ನಡೆಯಿತು.
ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಬಿಜೂರು, ಪ್ರಮುಖರಾದ ರವೀಂದ್ರ ಖಾರ್ವಿ, ಸುರೇಂದ್ರ ಕೋಟೇಶ್ವರ, ರಾವೇಂದ್ರ ಶೆಟ್ಟಿ, ರಾವೇಂದ್ರ ಆಚಾರ್ಯ, ಸಂತೋಷ ಪೂಜಾರಿ, ಲಕ್ಷ್ಮೀಕಾಂತ, ರವೀಂದ್ರ, ಶೋಭಾ ಪುತ್ರನ್, ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣ ವೇದಿಕೆ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.