ಬೆಂಕಿಗಾಹುತಿಯಾದ ಹೋಟೆಲ್‌ನಲ್ಲಿದ್ದ ಸೊತ್ತುಗಳು. 
ಉಡುಪಿ

ಅಗ್ನಿ ಅವಘಡ, ಸೊತ್ತುಗಳು ಬೆಂಕಿಗಾಹುತಿ

ಶಾರ್ಟ್ ಸರ್ಕ್ಯೂಟ್‌

ಕಾರ್ಕಳ: ಕಾಂಜಾರಕಟ್ಟೆ ಕೃಷ್ಣದಾಸ್ ಶೆಣೈ ಎಂಬುವರಿಗೆ ಸೇರಿದ ಹೋಟೆಲ್‌ನಲ್ಲಿ ಗುರುವಾರ ರಾತ್ರಿ 9.30ರ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಭಾರಿ ನಷ್ಟ ಸಂಭವಿಸಿದೆ. ಅಡುಗೆ ಮನೆಯಲ್ಲಿದ್ದ ಪಾತ್ರೆಗಳು, ಗ್ರೈಂಡರ್, ಗ್ಯಾಸ್ ಸ್ಟೌ, ಛಾವಣಿಯ ಪಕ್ಕಾಸು, ಹೆಂಚು ಸಹಿತ ಫ್ರಿಡ್ಜ್ ಹಾಗೂ ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ರೋಹಿತ್, ಸುರೇಶ್, ಚಾಲಕ ಶಿವಾನಂದ, ದಿನೇಶ್ ಹಾಗೂ ವಿಶ್ವನಾಥ್ ಕಾರ್ಯನಿರ್ವಹಿಸಿದ್ದಾರೆ.