ಕೊಕ್ಕರ್ಣೆ ಶಿವಗಿರಿ ಬ್ರಹ್ಮಶ್ರೀ ನಾರಾಯ ಗುರು ಬಿಲ್ಲವರ ಸೇವಾ ಸಂದ ರಜತ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿಖ್ಯಾತನಂದ ಸ್ವಾಮೀಜಿ ತನಾಡಿದರು.
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಗುರುಗಳ ತತ್ವಾದರ್ಶ, ಚಿಂತನೆ, ವಾರ್ಗದರ್ಶನದೊಂದಿಗೆ ಮುನ್ನಡೆದಾಗ ಸವಾಜ ಉನ್ನತಿಯತ್ತ ಸಾಗುತ್ತದೆ. ಸಂದಿಂದ ನಮಗೆ ಏನು ಸಿಕ್ಕಿದೆ ಎನ್ನುವುದಕ್ಕಿಂತ ಸಂ, ಸವಾಜಕ್ಕೆ ನಾವೇನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ ಸೋಲೂರು ಮಠ ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು.
ಶನಿವಾರ ಕೊಕ್ಕರ್ಣೆ ಶಿವಗಿರಿ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವರ ಸೇವಾ ಸಂದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಸಂದ ಅಧ್ಯಕ್ಷೆ ಬೇಬಿ ಎಸ್.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಾಧಕಿ ವಿದುಷಿ ದೀಕ್ಷಾ ವಿ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಎಲ್ಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ಗೌರವಾರ್ಪಣೆ ನಡೆಯಿತು.
ಅಭಿಜಿತ್ ಸೂರಾಲು ಅರಮನೆ, ವಾಜಿ ಶಾಸಕ ಕೆ.ರುಪತಿ ಭಟ್, ಬಿಲ್ಲವರ ಮಹಾಮಂಡಲ ಉಪಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ವೈ.ಕರುಣಾಕರ ಶೆಟ್ಟಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಮಹೇಶ್ ಎಂ.ಅಂಚನ್, ಬಿಲ್ಲವ ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ, ಎಂ.ಸಿ.ಪೂಜಾರಿ, ಸಂದ ಮಹಿಳಾ ವೇದಿಕೆ ಅಧ್ಯಕ್ಷೆ ಶೀಲಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಕೆ.ಸಂಜೀವ ವಾಸ್ಟರ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಎ.ಭಾಸ್ಕರ ಪೂಜಾರಿ ವಂದಿಸಿದರು. ರಾವೇಂದ್ರ ನಾಯಕ್ ನಿರೂಪಿಸಿದರು. ಸುರೇಶ್ಚಂದ್ರ ಬಾಬು, ಪ್ರಜ್ವತ್ ಕೆ.ಎಸ್., ರವಿ ಕುವಾರ್ ಮತ್ತಿತರರು ಸಹಕರಿಸಿದರು.