ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮುಖ್ಯಶಿಕ್ಷಕ ಸತೀಶ್ ಭಟ್ ಬಿಳಿನೆಲೆ ಅವರನ್ನು ಸನ್ಮಾನಿಸಿದರು. ಪ್ರಮುಖರಾದ ಗಣೇಶ್ ನಡುವಾಲು, ಪ್ರಮೋದ್ ಕುಮಾರ್, ಕೇಶವ ಅಮೈ ಎಸ್‌ಆರ್‌ಕೆ, ಶ್ರೀಕೃಷ್ಣ ಶರ್ಮ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಸತ್ಕಾರ್ಯಕ್ಕೆ ಬುದ್ಧಿಶಕ್ತಿ ವಿನಿಯೋಗಿಸಿದಾಗ ಪ್ರಗತಿ

ಇಂದಿರಾ ಎನ್ ಕೆ
ಸುಬ್ರಹ್ಮಣ್ಯ: ಮನುಷ್ಯನಿಗೆ ಬದುಕು ಭಗವಂತ ನೀಡಿದ ಕೊಡುಗೆ. ಇದರೊಂದಿಗೆ ಅದಮ್ಯ ಬುದ್ಧಿಶಕ್ತಿಯನ್ನು ದೇವರು ನಮಗೆ ನೀಡಿದ್ದಾನೆ. ಕ್ರಿಯಾಶೀಲ ವ್ಯಕ್ತಿತ್ವವು ಮಾನವನ ಔನ್ನತ್ಯಕ್ಕೆ ಪೂರಕವಾಗುತ್ತದೆ. ಬುದ್ಧಿಶಕ್ತಿಯನ್ನು ಒಳ್ಳೆಯತನಕ್ಕೆ ಉಪಯೋಗಿಸಿದಾಗ ಪ್ರಗತಿ ಸಾಧ್ಯ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸುಬ್ರಹ್ಮಣ್ಯ ಮಠ ಎಜ್ಯುಕೇಶನ್ ಸೊಸೈಟಿ ಆಡಳಿತದ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಮತ್ತು ಶ್ರೀ ವೇದವ್ಯಾಸ ವಿದ್ಯಾಲಯದ ಆಶ್ರಯದಲ್ಲಿ ಬಿಳಿನೆಲೆಯಲ್ಲಿ ಸೋಮವಾರ ಮುಖ್ಯಶಿಕ್ಷಕ ಸತೀಶ್ ಭಟ್ ಬಿಳಿನೆಲೆ ಅವರಿಗೆ ಗೌರವಾರ್ಪಣೆ ಹಾಗೂ ವಾಚನಾಲಯಕ್ಕೆ ಪುಸ್ತಕಗಳ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ಬಿಳಿನೆಲೆ ಅವರನ್ನು ಗೌರವಿಸಲಾಯಿತು. ಸತೀಶ್ ಭಟ್ ವಾಚನಾಲಯಕ್ಕೆ ಪುಸ್ತಕ ಹಸ್ತಾಂತರಿಸಿದರು.
ಬಂಟ್ರ ಕ್ಲಸ್ಟರ್‌ನ ಸಿಆರ್‌ಪಿ ಗಣೇಶ್ ನಡುವಾಲು, ಲೋಕೋಪಯೋಗಿ ಇಲಾಖೆ ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅಭಿಯಂತ ಪ್ರಮೋದ್ ಕುಮಾರ್, ಉದ್ಯಮಿ ಕೇಶವ ಅಮೈ ಎಸ್‌ಆರ್‌ಕೆ, ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕರಾದ ಗೋಪಾಲಕೃಷ್ಣ ಬಿ, ಹಿರಿಯಣ್ಣ ಗೌಡ ಎ, ವಸಂತಿ ಜೆ, ಗಣಪತಿ ಭಟ್, ನಿವೃತ್ತ ಅಧ್ಯಾಪಕ ದುಗ್ಗಪ್ಪ ಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನೆಕಲ್ಲು ಮುಖ್ಯಅತಿಥಿಗಳಾಗಿದ್ದರು.
ಮುಖ್ಯಶಿಕ್ಷಕ ಸತ್ಯಶಂಕರ ಭಟ್ ಎಂ, ವೇದವ್ಯಾಸ ವಿದ್ಯಾಲಯದ ಮುಖ್ಯಶಿಕ್ಷಕ ಪ್ರಶಾಂತ್ ಬಿ, ನವನೀತ ಕ್ರೀಡಾಸಂಘದ ಅಧ್ಯಕ್ಷ ಡಾ.ಮಧುಸೂಧನ, ವೇದವ್ಯಾಸ ವಿದ್ಯಾಲಯದ ಪಿಟಿಎ ಅಧ್ಯಕ್ಷ ಕೇಶವ, ಗೋಪಾಲಕೃಷ್ಣ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕಮಲಾಕ್ಷ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ಉಪಸ್ಥಿತಿರಿದ್ದರು. ಶಿಕ್ಷಕಿ ರಮ್ಯಾ ವಂದಿಸಿದರು. ಶಿಕ್ಷಕ ಪ್ರವೀಣ್ ನಿರೂಪಿಸಿದರು.