ಉಡುಪಿಯಲ್ಲಿ ಆಯೋಜಿಸಿದ್ದ ಕಯ್ಯಾರ ಕಿಞ್ಞಣ್ಣ ರೈ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಬಿ. ಜಯಕರ್​ ಶೆಟ್ಟಿ ಇಂದ್ರಾಳಿ ಮಾತನಾಡಿದರು. ಭುವನಪ್ರಸಾದ್​ ಹೆಗ್ಡೆ, ವಿಶ್ವಾನಾಥ್​ ಶೆಣೈ, ಪ್ರಭಾವತಿ ವಿಶ್ವನಾಥ್​, ವಿದ್ಯಾ ಸರಸ್ವತಿ, ವಿನುತಾ ಎಸ್​. ನಾಯಕ್​ ಇದ್ದರು. 
ಉಡುಪಿ

ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ

* ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಅಭಿಪ್ರಾಯ

* 'ಕಿನ್ಯ ಜೋಕ್ಲೆಡ್ದ್​ ಸೊರ ಸಂಪು' ಕಾರ್ಯಕ್ರಮ

ಉಡುಪಿ: ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮುಂಚೂಣಿ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ ನಿರಂತರ ದುಡಿದವರು ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರು. ಕನ್ನಡ ಮತ್ತು ತುಳು ಭಾಷೆಗೆ ಅಪಾರ ಕೊಡುಗೆ ನೀಡಿದ ಕಿಞ್ಞಣ್ಣರನ್ನು ಈ ನಾಡಿನ ಜನತೆ ಎಂದಿಗೂ ಮರೆಯಬಾರದು ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ್​ ಶೆಟ್ಟಿ ಇಂದ್ರಾಳಿ ಹೇಳಿದರು.
ಉಡುಪಿಯ ಮುಕುಂದ ಕ್ರಪಾ ಶಾಲೆಯಲ್ಲಿ ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರ ಮತ್ತು ತುಳುಕೂಟ ಉಡುಪಿ ಸಹಯೋಗದಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಸ್ಮರಣಾರ್ಥ ಆಯೋಜಿಸಿದ್ದ 'ಕಿನ್ಯ ಜೋಕ್ಲೆಡ್ದ್​ ಸೊರ ಸಂಪು' ಕಾರ್ಯಕ್ರಮವನ್ನು ಕಿಞ್ಞಣ್ಣ ರೈ ಬರೆದ ಪದ್ಯ ಹಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹೊಸ ಹೆಜ್ಜೆ
ತುಳುಕೂಟದ ಉಪಾಧ್ಯಕ್ಷ ಹಾಗೂ ಕಿಞ್ಞಣ್ಣ ರೈ ಅಳಿಯ ಭುವನಪ್ರಸಾದ್​ ಹೆಗ್ಡೆ ಮಾತನಾಡಿ, ತುಳು ಭಾಷೆಯ ಉಳಿವಿಗಾಗಿ ಉಡುಪಿಯ ಎಲ್ಲ ಶಾಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೊಂದು ಹೊಸ ಹೆಜ್ಜೆಯಾಗಿದೆ. ಮಕ್ಕಳಿಗೆ ತುಳು ಭಾಷೆ, ಸಂಸತಿಯ ಅರಿವು ಮೂಡಿಸಲಾಗುತ್ತಿದ್ದು, ಮುಕುಂದ ಕೃಪಾ ಶಾಲೆಯಲ್ಲಿ ಆರಂಭಗೊಂಡಿದೆ ಎಂದರು.
ತುಳುಕೂಟದ ಗೌರವ ಸಲಹೆಗಾರ ವಿಶ್ವನಾಥ್​ ಶೆಣೈ, ರೇಡಿಯೋ ಮಣಿಪಾಲದ ಕಾರ್ಯಕ್ರಮ ಸಂಯೋಜಕಿ ಡಾ. ರಶ್ಮಿ ಅಮ್ಮೆಂಬಳ, ಮುಕುಂದ ಕೃಪಾ ಶಾಲೆಯ ಪ್ರಾಂಶುಪಾಲೆ ವಿನುತಾ ಎಸ್​. ನಾಯಕ್​ ಮಾತನಾಡಿದರು.
ತುಳುಕೂಟದ ಕಾರ್ಯಕಾರಿ ಸಮಿತಿಯ ಸದಸ್ಯೆ ಪ್ರಭಾವತಿ ವಿಶ್ವನಾಥ್​ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ವಿದ್ಯಾ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಗಂಗಾಧರ್​ ಕಿದಿಯೂರು ವಂದಿಸಿದರು. ಯಶೋದಾ ಕೇಶವ್​ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಮಕ್ಕಳು ತುಳು ಕಥೆ, ಗಾದೆ, ಕವಿತೆ ಹಾಗೂ ಪದ್ಯ ಹೇಳಿ ರಂಜಿಸಿದರು.