ಕುಪ್ಪೆಪದವು ಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆ ನಡೆಯಿತು. ಅಶ್ವತ್ ಕುಮಾರ್, ಗಿರೀಶ್ ಆಳ್ವ, ರಾಮಚಂದ್ರ ಸಾಲ್ಯಾನ್, ರಾಮಚಂದ್ರ ಐನ, ಸುಜಾತಾ ವೈ.ಬಳ್ಳಿ, ಶಿವಾನಿ ಮತ್ತಿತರರಿದ್ದರು.  
ಉಡುಪಿ

ಶೈಕ್ಷಣಿಕ ಕ್ರಾಂತಿಯ ಮೂಲಪುರುಷ

ಗುರುಪುರ: ಧಾರ್ಮಿಕ ಕ್ಷೇತ್ರದ ಮೂಲಕ ಶೈಕ್ಷಣಿಕ ಕ್ರಾಂತಿ ನಡೆಸಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ದಾರ್ಶನಿಕ ನಾರಾಯಣಗುರು. ಕೇರಳದಲ್ಲಿ ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ನಡೆದಿದ್ದರೆ ಅದಕ್ಕೆ ಮೂಲ ಕಾರಣ ನಾರಾಯಣಗುರುಗಳಾಗಿದ್ದಾರೆ ಎಂದು ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ಹೇಳಿದರು.
ಕುಪ್ಪೆಪದವು ಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಭಾನುವಾರ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳಗ್ಗೆ ಗಣಪತಿ ಹೋಮ, ಭಜನಾ ಸಂಕೀರ್ತನೆ ನಡೆದ ಬಳಿಕ ನಾರಾಯಣಗುರುಗಳಿಗೆ ಪೂಜೆ ನೆರವೇರಿತು. ಶಾಸಕ ಡಾ.ಭರತ್ ಶೆಟ್ಟಿ, ಮೂಲ್ಕಿ ಐಎಂಎ ಫೌಂಡೇಶನ್‌ನ ಇನಾಯತ್ ಅಲಿ, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ), ವರಾಹ ಫೌಂಡೇಶನ್ ಸ್ಥಾಪಕ ಗಿರೀಶ್ ಆಳ್ವ, ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್ ಮಾತನಾಡಿದರು.
ಪ್ರಮುಖರಾದ ರಾಮಚಂದ್ರ ಐನ, ಸುಜಾತಾ ವೈ.ಬಳ್ಳಿ, ಶಿವಾನಿ, ಶೇಖರ ನೇಲಚ್ಚಿಲ್, ಮಹಾಬಲ ಸಾಲ್ಯಾನ್ ಕೊಂದರಪ್ಪು ಇದ್ದರು. ಇನಾಯತ್ ಅಲಿ, ನೋಣಯ್ಯ ಪೂಜಾರಿ ಕೂಟೇಲು, ಸಾನ್ವಿ ಬಳ್ಳಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿವೇತನ, ಆರೋಗ್ಯ ನಿಧಿ, ವಿವಾಹ ಹಾಗೂ ಶೈಕ್ಷಣಿಕ ನೆರವು ನೀಡಲಾಯಿತು.
ಸಮಿತಿ ಕಾರ್ಯದರ್ಶಿ ರಘು ಎಂ.ಅಗರಿ ವರದಿ ಓದಿದರು. ಗೌರವಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೊಟ್ಟು ಸ್ವಾಗತಿಸಿದರು. ಲೋಕೇಶ್ ಚಂದ್ರಮಜಲು ಮತ್ತು ವಿಶ್ವನಾಥ ಪಂಜ ಸನ್ಮಾನ ಪತ್ರ ಓದಿದರು. ಯಶವಂತ ಅಗರಿ ನಿರೂಪಿಸಿದರು. ಸತೀಶ್ ಪೂಜಾರಿ ಬಳ್ಳಾಜೆ ವಂದಿಸಿದರು.