ಪೂರ್ಣಪ್ರಜ್ಞ ಕಾಲೇಜ್​ನ ವಿದ್ಯಾರ್ಥಿಗಳಿಗೆ ಹಿತನುಡಿಯೊಂದಿಗೆ ಮಾರ್ಗದರ್ಶನ ಮಾಡಿದ ಕೃಷ್ಣ ಭಟ್​ ಅವರನ್ನು ರಾಮು ಎಲ್​. ಗೌರವಿಸಿದರು. ಡಾ. ಪಿ.ಎಸ್​. ಐತಾಳ್​, ಡಾ. ಮಂಜುನಾಥ ಕರಬ, ವಿನಯ್​ ಕುಮಾರ್​ ಡಿ., ಸುಮಲತಾ ಪಿ.ಜೆ., ಪ್ರತಿಭಾ ಸಿ. ಆಚಾರ್ಯ ಇದ್ದರು. 
ಉಡುಪಿ

ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವ ಅಗತ್ಯ

* ಸರ್ಕಾರಿ ಮಹಿಳಾ ಕಾಲೇಜ್​ ಪ್ರಾಧ್ಯಾಪಕ ಕೃಷ್ಣ ಭಟ್​ ಅನಿಸಿಕೆ

* ಪಿಪಿಸಿಯಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಉಡುಪಿ: ಶಾಲಾ-ಕಾಲೇಜುಗಳಲ್ಲಿ ಆಯೋಜಿಸುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಅದರಿಂದ ಜೀವನದಲ್ಲಿ ಎಲ್ಲವನ್ನೂ ಎದುರಿಸಲು ಸಾಧ್ಯ. ಇಂತಹ ಸ್ಪರ್ಧೆ, ಚಟುವಟಿಕೆಗಳ ಮೂಲಕ ಜೀವನಕ್ಕೆ ಬೇಕಾದ ಕೌಶಲಗಳೂ ಲಭಿಸುತ್ತವೆ ಎಂದು ಉಡುಪಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ನ ಪ್ರಾಧ್ಯಾಪಕ ಕೃಷ್ಣ ಭಟ್​ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಪೂರ್ಣಪ್ರಜ್ಞಾ ಕಾಲೇಜ್​ (ಸ್ವಾಯತ್ತ)ನಲ್ಲಿ ನಡೆದಿದ್ದ ವಾರ್ಷಿಕ ಚಟುವಟಿಕೆ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಿತನುಡಿಯೊಂದಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು.
ಪಿಐಎಂ ನಿರ್ದೇಶಕ ಡಾ. ಪಿ.ಎಸ್​. ಐತಾಳ್​, ಕಾಲೇಜ್​ನ ಪ್ರಾಂಶುಪಾಲರಾದ ಡಾ. ರಾಮು ಎಲ್​., ಐಕ್ಯುಎಸಿ ಸಂಯೋಜಕ ವಿನಯ್​ ಕುಮಾರ್​ ಡಿ., ಸ್ಟೂಡೆಂಟ್​ ವೆಲ್​ಫೇರ್​ ಅಧಿಕಾರಿಗಳಾದ ಸುಮಲತಾ ಪಿ.ಜೆ. ಮತ್ತು ಪ್ರತಿಭಾ ಸಿ. ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕೆ.ಪಿ. ನೇಹಾ, ಶರಲ್​ ಕಾರ್ನೆಲಿಯೋ, ದೀಪಾ ಬಿ., ವಂದನಾ ಆರ್​. ಹೆಗ್ಡೆ, ಪ್ರೀತಿ ಶೆಟ್ಟಿ, ಸಫಾ ಆಮಿನಾ ಪಾಲ್ಗೊಂಡಿದ್ದರು.
ನೇಹಾ ವಾರ್ಷಿಕ ವರದಿ ವಾಚಿಸಿದರು. ಭಾಗ್ಯಶ್ರೀ ಎನ್​ಸಿಸಿ ವಿಭಾಗದ ಚಟುವಟಿಕೆಗಳ ವರದಿ ಮಂಡಿಸಿದರು. ಕಾರ್ತಿಕ್​ ಎನ್​ಸಿಸಿ ನೌಕಾ ವಿಭಾಗದ ವರದಿ, ಜ್ಞಾನಾ ಎನ್​ಎಸ್​ಎಸ್​ ವರದಿ ಹಾಗೂ ಅಭಯ್​ ಕ್ರೀಡಾ ವರದಿ ವಾಚಿಸಿದರು.
57 ದತ್ತಿನಿಧಿಗಳು ಹಾಗೂ ವಿಷಯವಾರು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜ್​ನ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕ ಡಾ. ಮಂಜುನಾಥ ಕರಬ ಸ್ವಾಗತಿಸಿದರು. ಶ್ರದ್ಧಾ ವಂದಿಸಿದರು. ಸಿರಿ ಕಾರ್ಯಕ್ರಮ ನಿರೂಪಿಸಿದರು.