ಕಿಲ್ಪಾಡಿಯ ಬೆಥನಿ ಐಸಿಎಸ್‌ಇ ಶಾಲೆಯಲ್ಲಿ ಎಐ ಮತ್ತು ರೋಬಾಟಿಕ್ಸ್ ಲ್ಯಾಬ್ ಉದ್ಘಾಟನೆಗೊಂಡಿತು. ಮೂಲ್ಕಿ ಡಿವೈನ್ ಕಾಲ್ ಸೆಂಟರಿನ ಫಾ.ಸುಶೀಲ್ ಎಸ್.ವಿ.ಡಿ., ಶಾಲೆಯ ಸಂಚಾಲಕಿ ಭಗಿನಿ ಅರುಣ್ ಸಾವಿಯೋ ಬಿ.ಎಸ್. ಮತ್ತಿತರರಿದ್ದರು.
ಮೂಲ್ಕಿ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲವನ್ನು ಬೆಳೆಸುವ ಮೂಲಕ ಮಾನವ ಸಂಪನ್ಮೂಲ ತಯಾರಿಗೆ ಎಐ ರೋಬಾಟಿಕ್ಸ್ ಲ್ಯಾಬ್‌ಗಳು ಬಹುಪೂರಕ ಎಂದು ಮೂಲ್ಕಿ ಡಿವೈನ್ ಕಾಲ್ ಸೆಂಟರಿನ ಫಾ.ಸುಶೀಲ್ ಎಸ್.ವಿ.ಡಿ. ಹೇಳಿದರು.
ಕಿಲ್ಪಾಡಿಯ ಬೆಥನಿ ಐಸಿಎಸ್‌ಇ ಶಾಲೆಯಲ್ಲಿ ಎಐ ಮತ್ತು ರೋಬಾಟಿಕ್ಸ್ ಲ್ಯಾಬ್‌ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಶಾಲೆಯ ಸಂಚಾಲಕಿ ಭಗಿನಿ ಅರುಣ್ ಸಾವಿಯೋ ಬಿ.ಎಸ್. ಲ್ಯಾಬ್ ಉದ್ಘಾಟಿಸಿದರು. ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (ಎಐ) ಹಾಗೂ ರೋಬಾಟಿಕ್ಸ್ ಮಹತ್ವ, ಅದರ ಉಪಯೋಗಗಳು ಮತ್ತು ಭವಿಷ್ಯದ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಪ್ರಾಂಶುಪಾಲೆ ಭಗಿನಿ ಜೆಸಿಂತಾ ಕ್ರಾಸ್ತಾ ಬಿ.ಎಸ್., ಸಹಪ್ರಾಂಶುಪಾಲೆ ಭಗಿನಿ ಫ್ಲೋರಿಟಾ ಬಿ.ಎಸ್., ಎಐ ಮತ್ತು ರೋಬಾಟಿಕ್ಸ್ ಲ್ಯಾಬ್ ಸಂಯೋಜಕಿ ನತಾಶಾ, ಶಾಲೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.