Heart Attack 
ಉಡುಪಿ

ಚಿಕಿತ್ಸೆಯಲ್ಲಿದ್ದ ಅರ್ಚಕ ಹೃದಯಾಘಾತದಿಂದ ಮೃತ್ಯು

ಕಾಸರಗೋಡು: ಅಸೌಖ್ಯ ಕಾಣಿಸಿಕೊಂಡು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅರ್ಚಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೂಲತಃ ಅನಂತಪುರ ನಿವಾಸಿ, ಪ್ರಸಕ್ತ ಕುಂಟಾರು ಸನಿಹದ ಮನಿಯೂರಲ್ಲಿ ವಾಸಿಸುತ್ತಿರುವ ಮುರಳೀಧರ ಪೆರ್ಲಾಯ (46) ಮೃತರು. ಎರಡು ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಮಧ್ಯೆ ಹೃದಯಾಘಾತವಾಗಿ ಸಾವು ಸಂಭವಿಸಿದೆ. ಅನಂತಪುರದ ದಿ.ಕೇಶವ ಪೆರ್ವಾಯ ಅವರ ಪುತ್ರನಾದ ಮುರಳೀಧರ ಪೆರ್ಲಾಯ 25 ವರ್ಷಗಳಿಂದ ಕುಂಟಾರು ದೇವಸ್ಥಾನ ಹಾಗೂ ತಾಂತ್ರಿಕ ಸದನದಲ್ಲಿ ವೈದಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.