ಶಿರ್ವ ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ವನಮಹೋತ್ಸವ ನಡೆಯಿತು. ಪ್ರಮುಖರಾದ ಬಗ್ಯಾರಕ್ಯಾರು ಸುಂದರ ಶೆಟ್ಟಿ, ಡಾ.ಸತೀಶ್ ಕುಮಾರ್ ಭಂಡಾರಿ, ವನಿತಾ ಆಚಾರ್ಯ, ಚಂದ್ರಮಣಿ, ಪ್ರೊ.ವೈ.ಭಾಸ್ಕರ ಶೆಟ್ಟಿ ಮೊದಲಾದವರಿದ್ದರು. 
ಉಡುಪಿ

ಔಷಧೀಯ ಸಸ್ಯ ಸಂರಕ್ಷಿಸಿ ಪರಿಸರ ಶುದ್ಧ

ಶಿರ್ವ: ವನ್ಯ ಸಂಪತ್ತು ಅದರಲ್ಲೂ ಮುಖ್ಯವಾಗಿ ಔಷಧೀಯ ಗುಣ ಹೊಂದಿರುವ ಸಸ್ಯಗಳು ಅಮೂಲ್ಯವಾಗಿದ್ದು, ಅದನ್ನು ಸಂರಕ್ಷಿಸಿ ಪರಿಸರ ಶುದ್ಧಗೊಳಿಸುವ ಕಾರ್ಯದಲ್ಲಿ ಯುವಕರು ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಕೃಷಿಕ ಬಗ್ಯಾರಕ್ಯಾರು ಸುಂದರ ಶೆಟ್ಟಿ ಹೇಳಿದರು.
ಶಿರ್ವ ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಟ್ಟೆ ವಿವಿ ಆಡಳಿತಕ್ಕೊಳಪಟ್ಟ ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ವನಮಹೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ನಿಟ್ಟೆ ವಿವಿ ಉಪಾಧ್ಯಕ್ಷ(ಸಿ.ಆರ್.ಎಲ್. ಮತ್ತು ಐ.ಎಸ್.ಆರ್.) ಪ್ರೊ.ಡಾ.ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಿರ್ವ ಶಾಖೆಯ ಮ್ಯಾನೇಜರ್ ವನಿತಾ ಆಚಾರ್ಯ, ಶಿರ್ವ ಗ್ರಾಪಂ ಕಾರ್ಯದರ್ಶಿ ಚಂದ್ರಮಣಿ, ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಎಂ.ಎಸ್.ಆರ್.ಎಸ್. ಕಾಲೇಜಿನ ಎನ್.ಎಸ್.ಎಸ್. ಘಟಕ, ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ ಎನ್‌ಸಿಸಿ ಘಟಕದ ಅಧಿಕಾರಿಗಳು ಮತ್ತು ಸ್ವಯಂಸೇವಕರು ಪಾಲ್ಗೊಂಡಿದ್ದರು.
ಕ್ಷೇಮಾ ಗ್ರಾಮೀಣ ಆರೋಗ್ಯ ಕೇಂದ್ರಗಳ ಸಂಯೋಜಕ ಮೇಜರ್ ಡಾ.ರಾಘವೇಂದ್ರ ಹುಚ್ಚಣ್ಣವರ, ನಿಟ್ಟೆ ವಿವಿ ಸಮುದಾಯ ದಂತ ವೈದ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ಆಡ್ರಿ ಡಿಕ್ರೂಜ್, ಎಂ.ಎಸ್.ಆರ್.ಎಸ್. ಕಾಲೇಜಿನ ಪ್ರಾಂಶುಪಾಲ ಡಾ.ಮಿಥುನ್ ಚಕ್ರವರ್ತಿ, ಶಿರ್ವ ಗ್ರಾಮೀಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಜ್ಞಾ ಶೆಟ್ಟಿ, ಡಾ.ನಿವೇದಿತಾ ಮೂರ್ತಿ, ಹಿಂದೂ ಪ್ರೌಢಶಾಲೆ ಮುಖ್ಯಶಿಕ್ಷಕಿ ವಸಂತಿ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಡಾ.ಸೋನಾ ಸ್ವಾಗತಿಸಿದರು. ಎನ್‌ಸಿಸಿ ಅಧಿಕಾರಿ ಅನುಶ್ರೀ ವಂದಿಸಿದರು.