ಸಮೃದ್ಧ ಬೈಂದೂರು ವತಿಯಿಂದ ನಿವೃತ್ತ ಶಿಕ್ಷಕರ ಸಮಾಗಮ ಪ್ರೇರಣಧಾರೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಶಾಸಕ ಗುರುರಾಜ ಗಂಟಿಹೊಳೆ ಸನ್ಮಾನಿಸಿದರು 
ಉಡುಪಿ

ಕ್ಷೇತ್ರ ವ್ಯಾಪ್ತಿಯ ನಿವೃತ್ತ ಶಿಕ್ಷಕರ ಸಮಾಗಮ ‘ಪ್ರೇರಣಧಾರೆ’

ಬೈಂದೂರು: ಸಮೃದ್ಧ ಬೈಂದೂರು ವತಿಯಿಂದ ನಿವೃತ್ತ ಶಿಕ್ಷಕರ ಸಮಾಗಮ ‘ಪ್ರೇರಣಧಾರೆ’ ಕಾರ್ಯಕ್ರಮ ಭಾನುವಾರ ಉಪ್ಪುಂದ ರೈತ ಸಿರಿ ಸಭಾಭವನದಲ್ಲಿ ಜರುಗಿತು.
ಶಿಕ್ಷಕರೆಂದರೆ ನಿವೃತ್ತಿ ಇಲ್ಲದವರು, ಅವರು ಸಮಾಜಕ್ಕೆ ಸದಾಕಾಲ ಬೆಳಕು ನೀಡುವ ದೀಪಗಳು ಎನ್ನುವ ಪರಿಕಲ್ಪನೆ ಅಡಿಯಲ್ಲಿ ಬೈಂದೂರು ಕ್ಷೇತ್ರ ವ್ಯಾಪ್ತಿಯ ನಿವೃತ್ತ ಶಿಕ್ಷಕರ ವಿಶ್ರಾಂತ ಬದುಕು ಮೆಲುಕು ಹಾಕುವ ಉದ್ದೇಶದಿಂದ ಶಾಸಕ ಗುರುರಾಜ್ ಗಂಟಿಹೊಳೆ ಅವರ ಕಲ್ಪನೆಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಯಮಿ ಜಿ.ಗೋಕುಲ್ ಶೆಟ್ಟಿ ಉದ್ಘಾಟಿಸಿದರು.
ವೃತ್ತಿ ಮತ್ತು ಪ್ರವೃತ್ತಿ ಎಂಬ ಅವಧಿಯನ್ನು ವಿಶ್ರಾಂತ ಉಪನಿರ್ದೇಶಕ ದಿವಾಕರ್ ಶೆಟ್ಟಿ ನಡೆಸಿಕೊಟ್ಟರು. ಹಿರಿಯ ವಕೀಲ ಎ.ಎಸ್.ಎನ್.ಹೆಬ್ಬಾರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಮಾತನಾಡಿದರು.
ನಿವೃತ್ತ ಶಿಕ್ಷಕರೊಂದಿಗೆ ಶಾಸಕ ಗುರುರಾಜ ಗಂಟಿಹೊಳೆ ಸಂವಾದ ನಡೆಸಿದರು. ರೇಡಿಯೋ ಕುಂದಾಪುರ ನಿರ್ದೇಶಕಿ ಜ್ಯೋತಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ರಾಘವೇಂದ್ರ ದಡ್ಡು ಸ್ವಾಗತಿಸಿದರು. ಸುಧಾಕರ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಹೋಬಳಿದಾರ್ ನಿರೂಪಿಸಿದರು. ಶ್ರೀಧರ್ ವಸ್ರೆ ವಂದಿಸಿದರು.