ಉಡುಪಿಯ ಡಿಸಿ ಕಚೇರಿಯಲ್ಲಿ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವದ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು. ಗುರ್ಮೆ ಸುರೇಶ್ ಶೆಟ್ಟಿ, ಸ್ವರೂಪಾ ಟಿ.ಕೆ., ಕೆ. ವಾಸುದೇವ ಶೆಟ್ಟಿ, ರತ್ನಾಕರ್ ಶೆಟ್ಟಿ ನಡಿಕೆರೆ ಇತರರಿದ್ದರು.
* ಉಡುಪಿ ಡಿಸಿ ಕಚೇರಿಯಲ್ಲಿ 'ಮಾತೃ ವೈಭವ' ಪೂರ್ವಭಾವಿ ಸಭೆ
ಉಡುಪಿ: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಧಂತಿ 'ಮಾತೃ ವೈಭವ' ಕಾರ್ಯಕ್ರಮ ಫೆ.28ರಿಂದ ಮಾ.3ರ ವರೆಗೆ ನಡೆಯಲಿದ್ದು, ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೋರ್ಟ್ ಹಾಲ್ನಲ್ಲಿ ಸೋಮವಾರ (ಫೆ.23) ಪೂರ್ವಭಾವಿ ಸಭೆ ನಡೆಯಿತು.
ದೇವಸ್ಥಾನದ ಜೀಣೋರ್ದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, 3 ದಿನಗಳ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈ ದಿನಗಳಂದು ಸುಗಮ ವಾಹನ ಸಂಚಾರ ಹಾಗೂ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ನಿರ್ವಹಿಸುವಂತೆ ಚರ್ಚಿಸಲಾಯಿತು.
ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ ನಡಿಕೆರೆ ಮಾತನಾಡಿದರು.
ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಮಾತೃ ವೈಭವ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ಮಾತೃ ವೈಭವ ಸೇವಾ ಸಮಿತಿ ಹುಬ್ಬಳ್ಳಿ ವಲಯದ ಕಾರ್ಯಾಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಮಾತೃ ವೈಭವದ ಕಾನೂನು ಸುವ್ಯವಸ್ಥೆ ಸಮಿತಿಯ ಪ್ರಧಾನ ಸಂಚಾಲಕ ರೋಷನ್ ಕುಮಾರ್ ಶೆಟ್ಟಿ, ಕಾಪು ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ, ಪೊಲೀಸ್ ಉಪ ನಿರೀಕ್ಷಕ ತೇಜಸ್ವಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.