ಚಿತ್ರದುರ್ಗದದಲ್ಲಿ ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವದ ಕುಂದಾಪುರ ವಿಧಾನಸಭಾ ೇತ್ರ ವ್ಯಾಪ್ತಿಯ ಪೂರ್ವಭಾವಿ ಸಭೆ ಬಿಜೆಪಿ ಕುಂದಾಪುರ ಮಂಡಲ ಕಚೇರಿಯಲ್ಲಿ ನಡೆಯಿತು. ಪ್ರಮುಖರಾದ ಶಂಕರ ಅಂಕದಕಟ್ಟೆ, ಕಾಡೂರು ಸುರೇಶ್ ಶೆಟ್ಟಿ, ಸದಾನಂದ ಬಳ್ಕೂರು, ಪ್ರಕಾಶ್ ಜಿ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
- ರಾಜಕೀಯ ಜೀವನದ ಐವತ್ತು ವರ್ಷ ಪೂರೈಸಿದ ಹಿನ್ನೆಲೆ
- ಬಿಜೆಪಿ ಕುಂದಾಪುರ ಮಂಡಲ ಕಚೇರಿಯಲ್ಲಿ ಮೀಟಿಂಗ್
ಕುಂದಾಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜಕೀಯ ಜೀವನದ ಐವತ್ತು ವರ್ಷ ಪೂರೈಸಿದ ಹಿನ್ನೆಲೆ ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೂರ್ವಭಾವಿ ಸಭೆ ಬಿಜೆಪಿ ಕುಂದಾಪುರ ಮಂಡಲ ಕಚೇರಿಯಲ್ಲಿ ಬುಧವಾರ ನಡೆಯಿತು.
ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಅಧ್ಯಕ್ಷತೆ ವಹಿಸಿದ್ದರು. ಬೀಜಾಡಿ ಮೀನುಗಾರಿಕಾ ಸೊಸೈಟಿ ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ಬೀಜಾಡಿ ಅವರನ್ನು ಭಾರತೀಯ ಜನತಾ ಪಾರ್ಟಿ ವತಿಯಿಂದ ಸನ್ಮಾನಿಸಲಾಯಿತು.
ಮಂಡಲ ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಮಂಡಲ ಉಪಾಧ್ಯಕ್ಷ ಪ್ರಕಾಶ್ ಜಿ.ಪೂಜಾರಿ ಮತ್ತಿತರರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್. ಸ್ವಾಗತಿಸಿದರು. ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್ ವಂದಿಸಿದರು.