ಉಡುಪಿಯ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಉದಯಕುಮಾರ್ ಶೆಟ್ಟಿ ಮುನಿಯಾಲು ಉದ್ಘಾಟಿಸಿದರು. ಶ್ರೀನಿವಾಸ್ ಪೂಜಾರಿ, ಪ್ರಕಾಶ್ ಶೆಟ್ಟಿ, ಮಹೇಶ್ ಠಾಕೂರ್, ಸುರೇಂದ್ರ ನಾಯ್ಕ್, ಎಸ್.ದಿನೇಶ್ ಪ್ರಭು ಇತರರಿದ್ದರು.
* ಉಮಾಮಹೇಶ್ವರ ದೇಗುಲದಲ್ಲಿ ಪೂರ್ವಭಾವಿ ಸಭೆ
ಉಡುಪಿ: ಐತಿಹಾಸಿಕ ಶಿವಪಾಡಿ ವೈಭವ' ಕಾರ್ಯಕ್ರಮವನ್ನು ಫೆ.14 ಮತ್ತು ಫೆ.15ರಂದು ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಲು ಸಮಿತಿಯವರು ನಿರ್ಧರಿಸಿದ್ದಾರೆ.
ಮಣಿಪಾಲದ ಸರಳಬೆಟ್ಟು ಸಮೀಪದ ಶಿವಪಾಡಿಯಲ್ಲಿರುವ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರು ಈ ರ್ನಿಣಯ ಕೈಗೊಂಡರು. ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ಬಬ್ಬು ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ, ಮಣಿಪಾಲ ಪ.ಪೂ. ಕಾಲೇಜಿನ ಸಂಚಾಲಕ ಪ್ರಕಾಶ್ ಶೆಟ್ಟಿ, ವಿಶ್ರಾಂತ ಪತ್ರಕರ್ತ ನಿತ್ಯಾನಂದ ಪಡ್ರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಸುರೇಂದ್ರ ನಾಯ್ಕ್, ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಎಸ್.ದಿನೇಶ್ ಪ್ರಭು, ಆಡಳಿತ ಮೊಕ್ತೇಸರರಾದ ಮಹೇಶ್ ಠಾಕೂರ್ ಮತ್ತು ಸುಭಾಕರ್ ಸಾಮಂತ್, ಶಾಶ್ವತ ಟ್ರಸ್ಟಿ ದಿನೇಶ್ ಎಸ್. ಸಾಮಂತ, ಉಪಾಧ್ಯಕ್ಷ ಪುರುಷೋತ್ತಮ ಪ್ರಭು, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಜತೆ ಕಾರ್ಯದರ್ಶಿ ಅಶೋಕ್ ಸಾಮಂತ್, ಕೋಶಾಧಿಕಾರಿ ಶ್ರೀಕಾಂತ ಪ್ರಭು,ಟ್ರಸ್ಟಿಗಳಾದ ಪ್ರಕಾಶ್ ಪ್ರಭು, ಜಿ.ಕೃಷ್ಣರಾಯ ಪಾಟೀಲ್, ಟ್ರಸ್ಟಿ ಮತ್ತು ಕೆಕೆಡಿಜಿಬಿ ವಿದ್ಯಾ ಪ್ರಸಾರಕ ಮಂಡಲದ ಅಧ್ಯಕ್ಷ ಸತೀಶ್ ಪಾಟೀಲ್, ಶಿವಪಾಡಿ ವೈಭವ ಆಚರಣಾ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಮಾಹೆ ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು, ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೇಷ್ಮಾ, ಕಲಾವಿದೆ ವಿದುಷಿ ಉಷಾ ಹೆಬ್ಬಾರ್, ಅನಂತ ನಾಯ್ಕ್ ಇತರರು ಉಪಸ್ಥಿತರಿದ್ದರು.