ಕಯ್ಯರ ಕಿಞ್ಞಣ್ಣ ರೈ ಸ್ಮಾರಕ ಕನ್ನಡ ಭವನ ಉದ್ಘಾಟನಾ ಪೂರ್ವಭಾವಿ ಸಭೆಯಲ್ಲಿಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿದರು. ಪ್ರಕಾಶ್ ಮತ್ತೀಹಳ್ಳಿ, ಕಲ್ಲಟ್ರ ಮಾಹಿನ್ ಮೊದಲಾದವರು ಉಪಸ್ಥಿತರಿದ್ದರು.  
ಉಡುಪಿ

ಕಿಞ್ಞಣ್ಣ ರೈ ಸ್ಮಾರಕ ಕನ್ನಡ ಭವನ ಉದ್ಘಾಟನೆ ಪೂರ್ವಭಾವಿ ಸಭೆ

ಬದಿಯಡ್ಕ: ನಾಡೋಜ ಡಾ.ಕಯ್ಯರ ಕಿಞ್ಞಣ್ಣ ರೈ ಸ್ಮರಣಾರ್ಥ ಬದಿಯಡ್ಕ ಕಲ್ಲಕಳೆಯದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಕನ್ನಡ ಭವನದ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆ ಗುರುವಾರ ಕಲ್ಲಕಳೆಯದ ಕನ್ನಡ ಭವನ ಕಟ್ಟಡದಲ್ಲಿ ನಡೆಯಿತು.
ಮಲಯಾಳ ಭಾಷಾ ಮಸೂದೆ, ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರ ನೇಮಕ, ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ, ಕನ್ನಡಿಗರ ಶೈಕ್ಷಣಿಕ, ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಸಂಬಂಧಪಟ್ಟವದೊಂದಿಗೆ ಮಾತುಕತೆ ಮೂಲಕ ಸೌಹಾದರ್ಯುತ ಪರಿಹಾರಕ್ಕೆ ತೀರ್ಮಾನಿಸಲಾಯಿತು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಶಾಸಕ ಕಲ್ಲಟ್ರ ಮಾಹಿನ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲ ಕುಂಞಿ, ಬದಿಯಡ್ಕ ಗ್ರಾಪಂ ಅಧ್ಯಕ್ಷ ಶಂಕರ ಡಿ., ಜಿಪಂ ಸದಸ್ಯರಾದ ರಾಮಪ್ಪ ಮಂಜೇಶ್ವರ, ಸೋಮಶೇಖರ ಜೆ.ಎಸ್., ಹಿರಿಯ ನೇತಾರ ಕುಂಟಾರು ರವೀಶ ತಂತ್ರಿ, ಜನಪ್ರತಿನಿಧಿಗಳಾದ ಮಾಹಿನ್ ಕೇಳೋಟ್, ಶ್ಯಾಮ್‌ಪ್ರಸಾದ್ ಮಾನ್ಯ, ಎಂ.ಎಸ್.ಮೊಯ್ದೀನ್, ಬಾಲಕೃಷ್ಣ ಶೆಟ್ಟಿ, ಅಶ್ವಿನಿ ಮೊಳೆಯಾರ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕಾಧ್ಯಕ್ಷ ಡಾ.ಮಲ್ಲಿಕಾರ್ಜುನ ನಾಸಿ ಕೊಚ್ಚಿನ್, ಕಯ್ಯರರ ಹಿರಿಯ ಪುತ್ರ ದುರ್ಗಾಪ್ರಸಾದ್ ರೈ, ಡಾ.ಪ್ರಸನ್ನ ರೈ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಎಂ.ಎಸ್.ಮದಬಾವಿ, ಭಗತ್ ರಾಜ್ ನಿಜಾಂಕರಿ, ಡಾ.ಸಂಜೀವ ಕುಮಾರ, ಶಿವರೆಡ್ಡಿ ಖ್ವಾದೇಡ ಉಪಸ್ಥಿತರಿದ್ದರು. ಕನ್ನಡ ಭವನದ ಉದ್ಘಾಟನೆ ಸಂಬಂಧ ಸಮಿತಿ ರಚಿಸಲಾಯಿತು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಸ್ವಾಗತಿಸಿ, ವಂದಿಸಿದರು. ರವಿ ನಾಯ್ಕಪು ನಿರೂಪಿಸಿದರು.