ಉಡುಪಿಯ ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದಲ್ಲಿ 'ಅಗ್ನಿ ಮತ್ತು ಆರೋಗ್ಯ ಸುರಕ್ಷತೆ' ಕುರಿತು ಸತ್ಯರಾಜ್ ಪ್ರಾಯೋಗಿಕ ಪ್ರದರ್ಶನ ನೀಡಿದರು. ಡಾ. ಸುರೇಖಾ ಕೆ., ಪ್ರೊ. ರೋಹಿತ್ ಎಸ್. ಅಮೀನ್, ಡಾ. ನವೀನ್ಚಂದ್ರ ಸಿ.ಬಿ., ಅಮೋಘ್ ಗಡ್ಕರ್, ಸಮೀರ್ ತೀರ್ಥಹಳ್ಳಿ, ರಕ್ಷಿತಾ ಆರ್., ಅಂಕಿತಾ ಮತ್ತು ವಿದ್ಯಾರ್ಥಿಗಳಿದ್ದರು.
* ಅಗ್ನಿ ಮತ್ತು ಸುರಕ್ಷತಾ ಅಧಿಕಾರಿ ಸತ್ಯರಾಜ್ ಅನಿಸಿಕೆ
* ಬಾಳಿಗಾ ಕಾನೂನು ಕಾಲೇಜಿನಲ್ಲಿ ಪ್ರಾಯೋಗಿಕ ಪ್ರದರ್ಶನ
ಉಡುಪಿ: ಪ್ರಕೃತಿ ವಿಕೋಪದಂತೆಯೇ ಅಗ್ನಿ ಅವಡಗಳೂ ಆಕಸ್ಮಿಕವಾಗಿ ಸಂಭವಿಸುತ್ತವೆ. ಪರಿಸರದಲ್ಲಿ, ಮನೆಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ದುರಂತ ಸಂಭಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಬೆಂಕಿ ನಂದಿಸುವ ವಿಧಾನ ಹಾಗೂ ಅಗ್ನಿಶಾಮಕ ಉಪಕರಣಗಳ ಬಳಕೆಯ ವಿಧಾನದ ಜ್ಞಾನ ಎಲ್ಲರಿಗೂ ಅಗತ್ಯ ಎಂದು ಅಗ್ನಿ ಮತ್ತು ಸುರಕ್ಷತಾ ಅಧಿಕಾರಿ ಸತ್ಯರಾಜ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕ-1 ಮತ್ತು 2 ಹಾಗೂ ಕಾಲೇಜಿನ ಐಕ್ಯುಎಸಿ ಆಶ್ರಯದಲ್ಲಿ ಆಯೋಜಿಸಿದ್ದ 'ಅಗ್ನಿ ಮತ್ತು ಆರೋಗ್ಯ ಸುರಕ್ಷತೆ' ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಅಗ್ನಿ ಅವಘಡಗಳ ತಡೆ, ಅಗ್ನಿಶಾಮಕ ಉಪಕರಣಗಳ ಬಳಕೆ, ವಿಪತ್ತು ನಿರ್ವಹಣೆ, ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ, ಪ್ರಾಯೋಗಿಕ ಪ್ರದರ್ಶನದ ಮೂಲಕ ಸುರಕ್ಷತಾ ಕ್ರಮ ನಿರ್ವಹಿಸುವ ವಿಧಾನಗಳನ್ನೂ ವಿವರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ. ಸುರೇಖಾ ಕೆ. ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ವಿಭಾಗದ ಮುಖ್ಯಸ್ಥ ಪ್ರೊ. ರೋಹಿತ್ ಎಸ್. ಅಮೀನ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ನವೀನ್ಚಂದ್ರ ಸಿ.ಬಿ., ಅಮೋಘ್ ಗಡ್ಕರ್, ಎನ್ಎಸ್ಎಸ್ ಕಾರ್ಯದರ್ಶಿಗಳಾದ ಸಮೀರ್ ತೀರ್ಥಹಳ್ಳಿ, ರಕ್ಷಿತಾ ಆರ್. ಮತ್ತು ಅಂಕಿತಾ ಉಪಸ್ಥಿತರಿದ್ದರು.