ಸುಂದರ್​ ಶೆಟ್ಟಿ ಹಾಗೂ ಉಸ್ಮಾನ್​. 
ಉಡುಪಿ

ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸ್​ ದಾಳಿ

Vinod Kumar

ಪ್ರಮುಖ ಮುಖ್ಯಾಂಶಗಳು

  • ಬೆಳ್ತಂಗಡಿ ತಾಲೂಕಿನ ಕ್ಯಾಂಟಿನ್​ನೊಂದರಲ್ಲಿ ದಂಧೆ
  • ಕಾರ್ಯಾಚರಣೆ ವೇಳೆ ಕೃತ್ಯ ಬೆಳಕಿಗೆ
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತಾಲೂಕಿನ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ ಪವನ್​ ಹೆಸರಿನ ಕ್ಯಾಂಟಿನ್​ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕ್ಯಾಂಟಿನ್​ ಕೋಣೆಯಲ್ಲಿ ದಂಧೆ

ಕ್ಯಾಂಟಿನ್​ ನಡೆಸುತ್ತಿದ್ದ ಸುಂದರ್​ ಶೆಟ್ಟಿ ಹಾಗೂ ಪರಿಚಯದ ಉಸ್ಮಾನ್​ ಎಂಬುವರು ಕ್ಯಾಂಟಿನ್​ ಒಳಭಾಗದ ಕೋಣೆಯಲ್ಲಿ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಬೆಳ್ತಂಗಡಿ ಪೊಲೀಸ್​ ಠಾಣೆಯ ತನಿಖಾ ಉಪನಿರೀಕ್ಷಕ ಸಿಕಂದರ್​ ಪಾಷಾ ನೇತೃತ್ವದ ಪೊಲೀಸರು ಪರಿಶೀಲನೆ ನಡೆಸಿದಾಗ ವೇಶ್ಯಾವಾಟಿಕೆ ನಡೆಯುತ್ತಿದ್ದುದು ದೃಢಪಟ್ಟಿದೆ. 


ಪೊಲೀಸರಿಂದ ಕಾರ್ಯಾಚರಣೆ

ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್​. ನೇತೃತ್ವದಲ್ಲಿ ಪೊಲೀಸ್​ ಸಿಬ್ಬಂದಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿಸಲಾಗಿದೆ.