Crime 
ಉಡುಪಿ

ಕೋಳಿ ಅಂಕಕ್ಕೆ ಪೊಲೀಸರ ದಾಳಿ

ಇಂದಿರಾ ಎನ್ ಕೆ
ಬಂಟ್ವಾಳ: ಮೇರಮಜಲು ಗ್ರಾಮದ ಮಯ್ಯಡಿ ಎಂಬಲ್ಲಿ ಸರ್ಕಾರಿ ಗುಡ್ಡ ಜಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳ ಸಹಿತ 1800 ರೂ. ಮೌಲ್ಯದ 5 ಕೋಳಿ ಹಾಗೂ 2 ಬಾಲ್‌ಕತ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಸುರೇಶ ಬಂಟ್ವಾಳ(38) ಹಾಗೂ ಸುರೇಶ ಶೆಟ್ಟಿ ಅಡ್ಯಾರ್(61) ಎಂದು ಗುರುತಿಸಲಾಗಿದ್ದು ಅರುಣ್, ಶರತ್ ಮತ್ತಿತರರು ಫೊಲೀಸ್ ದಾಳಿಯ ವೇಳೆ ಪರಾರಿಯಾಗಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಎಸ್‌ಐ ಲೋಲಾಕ್ಷ ಕೆ. ತುಂಬೆ, ರಾಮಲ್ ಕಟ್ಟೆ, ಪುದು ಭಾಗದಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ಹಣ ಪಣವಾಗಿಟ್ಟು ಕೋಳಿ ಅಂಕ ಜುಗಾರಿ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಬೀಟ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ 5-6 ಜನರ ಗುಂಪು ಪರವಾನಗಿರಹಿತ ಕೋಳಿ ಅಂಕ ನಡೆಸುತ್ತಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.