ಎಆರ್​ಎಸ್​ಐ ನಾಗೇಶ್ 
ಉಡುಪಿ

ಡಿಎಆರ್​ ಪೊಲೀಸ್​ ಅಧಿಕಾರಿ ಕ್ಯಾನ್ಸರ್​ಗೆ ಬಲಿ

ಉಡುಪಿ: ಮಣಿಪಾಲ ಪೊಲೀಸ್​ ವಸತಿ ಗೃಹದಲ್ಲಿ ವಾಸ್ತವ್ಯದಲ್ಲಿದ್ದ ಡಿಎಆರ್​ ಎಆರ್​ಎಸ್​ಐ ನಾಗೇಶ್​ ಎಂ. (53) ಕ್ಯಾನ್ಸ್​ರ್​ ಕಾಯಿಲೆಯಿಂದ ಬಳಲುತ್ತಿದ್ದು, ಗುರುವಾರ ನಿಧನ ಹೊಂದಿದ್ದಾರೆ.

ಕಿನ್ನಿಗೋಳಿ ಪದ್ಮನೂರು ಮೂಲದ ನಾಗೇಶ್​ ಅವರು 1996ರಲ್ಲಿ ಮಂಗಳೂರಿನ ಡಿಎಆರ್​ನಲ್ಲಿ ನೇಮಕಾತಿ ಹೊಂದಿದ್ದು, ಹೊಸದಾಗಿ ಉಡುಪಿ ಜಿಲ್ಲೆ ಸೃಜನೆಯಾದ ಸಮಯದಲ್ಲಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. 2016ರಲ್ಲಿ ಪದೋನ್ನತಿ ಹೊಂದಿ ಎಆರ್​ಎಸ್​ಐ ಹುದ್ದೆ ಪಡೆದಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.