crime 
ಉಡುಪಿ

ಪೊಲೀಸ್ ಕಾನ್‌ಸ್ಟೆಬಲ್ ಮಂಗಳೂರಿನಲ್ಲಿ ಪತ್ತೆ

ಇಂದಿರಾ ಎನ್ ಕೆ

ಕಾಸರಗೋಡು: ನಾಪತ್ತೆಯಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟೆಂಗಾನ ಪೋರ್ಕಳ ನಿವಾಸಿ ಸಾಂಸನಲ್(27) ಎಂಬುವರನ್ನು ಮಂಗಳೂರಿನ ವಸತಿಗೃಹದಲ್ಲಿ ಪತ್ತೆಹಚ್ಚಲಾಗಿದೆ.

ಕಾಸರಗೋಡು ಹೆಡ್ ಕ್ವಾರ್ಟರ್ಸ್‌ನಲ್ಲಿ ಸಿವಿಲ್ ಪೊಲೀಸ್ ಆಫೀಸರ್ ಆಗಿರುವ ಅವರು ಪ್ರಸಕ್ತ ರಾಜಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಕೆಲವು ದಿನಗಳ ಹಿಂದೆ ಕರ್ತವ್ಯ ಮುಗಿಸಿ ಮನೆಗೆ ತಲುಪಿದ ಬಳಿಕ ಕಾಞಂಗಾಡಿಗೆ ತೆರಳುವುದಾಗಿ ಮನೆಯಿಂದ ಹೊರಟವರು ವಾಪಸಾಗದ ಹಿನ್ನೆಲೆಯಲ್ಲಿ ಅಂಬಲತ್ತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಸೈಬರ್‌ಸೆಲ್ ಸಹಾಯದಿಂದ ಅಂಬಲತ್ತರ ಠಾಣೆ ಎಸ್.ಐ. ಪ್ರಕಾಶ್ ನೇತೃತ್ವದಲ್ಲಿ ಪತ್ತೆಹಚ್ಚಲಾಗಿದೆ.