ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ‘ಕವಿತೆಗಳು’ ಕೃತಿ ಬಿಡುಗಡೆಯಲ್ಲಿ ಹಳೆಮನೆ ರಾಜಶೇಖರ, ಶ್ರೀನಿವಾಸ ಜೋಕಟ್ಟೆ, ಡಾ.ಎಂ.ಪಿ. ಶ್ರೀನಾಥ್, ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಮಂಜುನಾಥ ಎಸ್.ರೇವಣಕರ್ ಇದ್ದರು. 
ಉಡುಪಿ

ಕವಯಿತ್ರಿ ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ಕವಿತೆಗಳು ಕೃತಿ ಬಿಡುಗಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಮಂಗಳೂರು ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ಕವಿತೆಗಳು ಸಂಕಲನ ಅವರ ಹುಟ್ಟುಹಬ್ಬದ ದಿನ ಜ.3ರಂದು ಎಸ್‌ಡಿಎಂ ಕಾನೂನು ಕಾಲೇಜು ಸಭಾಗೃಹದಲ್ಲಿ ಬಿಡುಗಡೆಗೊಂಡಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ನಿಕಟಪೂರ್ವ ಅಧ್ಯಕ್ಷ ಎಸ್‌ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಎಂ.ಪಿ. ಶ್ರೀನಾಥ್ ಕವಿತಾ ಸಂಕಲನ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿ ಮಂಗಳೂರಿನ ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ, ಜಯಲಕ್ಷ್ಮೀ ಜೋಕಟ್ಟೆಯವರ ಪತಿ, ‘ಕವಿತೆಗಳು’ ಕೃತಿಯ ಸಂಪಾದಕ ಶ್ರೀನಿವಾಸ ಜೋಕಟ್ಟೆ, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಎಸ್.ರೇವಣಕರ್ ಉಪಸ್ಥಿತರಿದ್ದರು.
ಜಯಲಕ್ಷ್ಮೀ ಅವರ ಮಧುಬನ- ಮಳೆಗಾನ ಎಂಬ ಕವಿತೆಯನ್ನು ಹಳೆಮನೆ ರಾಜಶೇಖರ ಉಜಿರೆ ವಾಚಿಸಿದರು. ರೇಮಂಡ್ ಡಿಕುನ್ಹಾ ತಾಕೊಡೆ ಸ್ವಾಗತಿಸಿದರು. ಅರುಣ ನಾಗರಾಜ ವಂದಿಸಿದರು. ವಿಮರ್ಶಕ ಹಳೆಮನೆ ರಾಜಶೇಖರ ಉಜಿರೆ ನಿರೂಪಿಸಿದರು.