ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿದರು.
ಉಡುಪಿ: ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ ಅಂಗಸಂಸ್ಥೆ ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಮಂತ್ರಾಲಯ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗಿಯ ಕಚೇರಿ ಸಹಯೋಗದಲ್ಲಿ ಮಾ.17ರಂದು ಅಮೃತ್ ಗಾರ್ಡನ್ನಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಕೆ.ರುಪತಿ ಭಟ್ ತಿಳಿಸಿದರು.
ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 80 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. 1,500ರಿಂದ 2,000 ಮಂದಿ ಉದ್ಯೋಗಾಂಗಳ ನೇಮಕ ಪ್ರಕ್ರಿಯೆ ನಡೆಯುವ ನಿರೀೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ಕಂಪನಿಗಳು ತಮ್ಮ ಉದ್ಯೋಗಿಗಳಲ್ಲಿ ಶೇ.2.5ರಷ್ಟು ಮಂದಿಯನ್ನು ಪ್ರತಿ ವರ್ಷ ಅಪ್ರೆಂಟಿಶಿಪ್ ನೇಮಕಾತಿಗೆ ಕೇಂದ್ರ ಸರ್ಕಾರ ಕಾನೂನು ರಚಿಸಿದೆ. ಜತೆಗೆ ನೇಮಕವಾದ ಉದ್ಯೋಗಿಗಳಿಗೆ ಸಹಾಯಧನವನ್ನೂ ಮಂಜೂರು ಮಾಡಲಿದೆ. ಬೆಂಗಳೂರಿನಿಂದ ಕೌಶಲಾಭಿವೃದ್ಧಿ ಇಲಾಖೆ ನಿರ್ದೇಶಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪ್ರೆಂಟಿಶಿಪ್ ಮೂಲಕ ನೇಮಕಗೊಂಡವರಿಗೆ 1 ವರ್ಷಗಳ ತರಬೇತಿ ಬಳಿಕ ನೇರ ನೇಮಕಾತಿಗೆ ಅವಕಾಶವಿದೆ. ಹೀಗಾಗಿ ಉದ್ಯೋಗಾಂಗಳು ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಪ್ರಮುಖರಾದ ಮಹೇಶ್ ಠಾಕೂರ್, ರುನಾಥ ಮಾಬೇನ್, ಭಾಸ್ಕರ ಸುವರ್ಣ, ಸುಧಾಕರ ಅಮೀನ್, ರೂಪೇಶ್ ಕುಮಾರ್, ಓಬು ಪೂಜಾರಿ, ಗಣನಾಥ ಎಕ್ಕಾರ್ ಉಪಸ್ಥಿತರಿದ್ದರು.
ಹೊರದೇಶಗಳಲ್ಲಿ ಅನುಭವವಿಲ್ಲದ ಮಂದಿಗೆ ಉದ್ಯೋಗ ಸಿಗುವುದಿಲ್ಲ. ಹೀಗಾಗಿ ಅಪ್ರೆಂಟಿಶಿಪ್ ಮೇಳದಿಂದ ಯುವಕರಿಗೆ ಅನುಕೂಲವಾಗಲಿದೆ. ತಾವು ಓದಿದ ಡಿಗ್ರಿಗೆ ಸರಿಯಾದ ಉದ್ಯೋಗ ಪಡೆಯಲು ಮೇಳದಲ್ಲಿ ಅವಕಾಶವಿದೆ. ಕಳೆದ ವರ್ಷ ಉದ್ಯೋಗ ಮೇಳದಲ್ಲಿ 1,200 ಮಂದಿಗೆ ಉದ್ಯೋಗ ಲಭಿಸಿದ್ದು. ಈ ಬಾರಿ 2,000 ಮಂದಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳುವ ನಿರೀೆ ಇದೆ.