ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರನ್ನು ಭೇಟಿ ವಾಡಿ ಮನವಿ ಸಲ್ಲಿಸಿತು. 
ಉಡುಪಿ

ಜಮೀನು ಮಾಲೀಕತ್ವ ಪಡೆಯಲು ಪ್ಲಾಟಿಂಗ್ ಸಮಸ್ಯೆ

ಬೈಂದೂರು:ಜಡ್ಕಲ್ಹಾಗೂ ಮುದೂರು ಗ್ರಾಮದ ನೂರಾರುಕುಟುಂಬಗಳು ಭೂ ಸಂಬಂಧಿ ಪ್ಲಾಟಿಂಗ್ಸಮಸ್ಯೆಯಿಂದ ತಮ್ಮ ಜಮೀನಿನ ಮಾಲೀಕತ್ವದ ದಾಖಲೆ ಪಡೆಯಲಾಗದೆಸಮಸ್ಯೆ ಎದುರಿಸುತ್ತಿದ್ದಾರೆ.ಈಬಗ್ಗೆ ಅಲ್ಲಿನ ಪ್ರಮುಖರ ನಿಯೋಗದಜತೆ ಶಾಸಕ ಗುರುರಾಜ್ ಗಂಟಿಹೊಳೆಅವರು ಜಿಲ್ಲಾಧಿಕಾರಿ ಸ್ವರೂಪಾಟಿ.ಕೆ.ಅವರನ್ನುಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆಮನವಿ ಮಾಡಿದ್ದಾರೆ.

ಶಾಸಕರಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಸದ್ಯದಲ್ಲೇ ಉಪವಿಭಾಗಾಧಿಕಾರಿ,ಸರ್ವೇಹಾಗೂ ಕಂದಾಯ ಇಲಾಖೆ ಅಧಿಕಾರಿಗಳಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆಸೂಕ್ತ ಕಾರ್ಯಯೋಜನೆ ಹಾಕಿಕೊಳ್ಳುವುದಾಗಿಭರವಸೆ ನೀಡಿದರು.

ಜಡ್ಕಲ್,ಮುದೂರು,ಹೊಸಂಗಡಿ,ಸಿದ್ದಾಪುರ,ವಂಡ್ಸೆಭಾಗದ ಗ್ರಾಮೀಣ ಪ್ರದೇಶಗಳಲ್ಲಿರುವಬಸ್ ಸಮಸ್ಯೆಗಳ ಬಗ್ಗೆಯೂಜಿಲ್ಲಾಧಿಕಾರಿಗೆ ಮನವರಿಕೆಮಾಡಿದರು.

ಹೊಸಂಗಡಿಭಾಗದಲ್ಲಿ ವಾರಾಹಿ ನದಿಯಲ್ಲಿವಿದ್ಯುತ್ ಯೋಜನೆ ಸಂಬಂಧಿಸಿದಇಲಾಖೆಯ ಕಾರ್ಯ ಯೋಜನೆಗಳ ಬಗ್ಗೆಸಾರ್ವಜನಿಕರಿಗೆ ಸರಿಯಾದ ಮಾಹಿತಿಇಲ್ಲ.ಸ್ಥಳೀಯರೈತರನ್ನು ವಿಶ್ವಾಸಕ್ಕೆ ಪಡೆದುಅವರ ಅಭಿಪ್ರಾಯ ಕ್ರೋಡೀಕರಿಸುವಂತೆಜಿಲ್ಲಾಧಿಕಾರಿಗೆ ಮನವಿ ಮಾಡಲಾಯಿತು.

ಆಂಬುಲೆನ್ಸ್ಇಲ್ಲದೆ ತೊಂದರೆ

ಸಿದ್ದಾಪುರಪ್ರಾಥಮಿಕ ಆರೋಗ್ಯ ಕೇಂದ್ರವ್ಯಾಪ್ತಿಯಲ್ಲಿನ 108ಆಂಬುಲೆನ್ಸ್ಸೇವೆ ಚಾಲಕರಿಲ್ಲದ ನಿಂತು ಹೋಗಿದೆ.ಕ್ಷೇತ್ರದಇತರ ಕಡೆಯೂ ಸಮರ್ಪಕ ಆಂಬುಲೆನ್ಸ್ಸೇವೆ ಇಲ್ಲ.ಸಾರ್ವಜನಿಕರಆರೋಗ್ಯದ ಹಿತ ದೃಷ್ಟಿಯಿಂದತುರ್ತಾಗಿ ಸಮಸ್ಯೆ ಬಗೆಹರಿಸಬೇಕುಎಂದು ಶಾಸಕ ಗುರುರಾಜ್ ಗಂಟಿಹೊಳೆಒತ್ತಾಯಿಸಿದರು.