ನೀಟ್ ಅಕ್ರಮ, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಕಾರ್ಕಳ ಅನಂತಶಯನ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರಮುಖರಾದ ಮಂಜುನಾಥ ಪೂಜಾರಿ ಮುದ್ರಾಡಿ, ಉದಯ ಕುವಾರ್ ಶೆಟ್ಟಿ, ಬಿಪಿನ್‌ಚಂದ್ರಪಾಲ್ ನಕ್ರೆ, ಅಜಿತ್ ಹೆಗ್ಡೆ ಮಾಳ, ಶುಭದ ರಾವ್ ಮತ್ತಿತರರಿದ್ದರು.
ಕಾರ್ಕಳ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಕೋಟ್ಯಂತರ ವಿದ್ಯಾರ್ಥಿಗಳ ಬಾಳಿನಲ್ಲಿ ಚೆಲ್ಲಾಟವಾಡಿದ ನರೇಂದ್ರ ಮೋದಿ ನೇತೃತ್ವದ ಭ್ರಷ್ಟ ಸರ್ಕಾರದಿಂದ ದೇಶದ ಲೂಟಿ ನಡೆಯುತ್ತಿದೆ. ಆದ್ದರಿಂದ ಬಿಜೆಪಿಯವರು ಭಾರತ ಬಿಟ್ಟು ತೊಲಗಿ ಚಳವಳಿ ಮಾಡಲಾಗುವುದು ಎಂದು ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಹೇಳಿದರು.
ನೀಟ್ ಅಕ್ರಮ, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಎನ್‌ಎಸ್‌ಯುಐ ನೇತೃತ್ವದಲ್ಲಿ ಅನಂತಶಯನ ವೃತ್ತದಲ್ಲಿ ಶನಿವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ಪ್ರಮುಖರಾದ ಮುನಿಯಾಲು ಉದಯ ಕುಮಾರ್, ಬಿಪಿನ್‌ಚಂದ್ರಪಾಲ್ ನಕ್ರೆ, ಅಜಿತ್ ಹೆಗ್ಡೆ ವಾಳ, ಶುಭದ ರಾವ್, ಸುಭಿತ್ ಎನ್.ಆರ್., ಪ್ರತಿಮಾ ರಾಣೆ, ಶಂಕರ್, ಗೋಪಿನಾಥ್ ಭಟ್, ಕೃಷ್ಣ ಶೆಟ್ಟಿ ಬಜಗೋಳಿ, ಯೋಗೀಶ್ ಆಚಾರ್ಯ ಇನ್ನಾ, ಮಂಜುನಾಥ್ ಜೋಗಿ, ಜಾರ್ಜ್ ಕ್ಯಾಸ್ತಲಿನೋ, ಸುಧಾಕರ ಶೆಟ್ಟಿ ಮುಡಾರು, ಶಬ್ಬಿರ್ ಮಿಯ್ಯಾರು, ನವೀನ್ ದೇವಾಡಿಗ, ಮಾಲಿನಿ ರೈ, ಭಾನು ಭಾಸ್ಕರ್ ಮತ್ತಿತರರಿದ್ದರು.