ಕುಪ್ಪೆಪದವಿನ ಕಲ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಎಡಪದವು ಸಮೀಪ ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಮಾಡಿದರು. 
ಉಡುಪಿ

ಕೆಸರು ಗದ್ದೆಯಲ್ಲಿ ಕಲ್ಲಾಡಿ ಶಾಲಾ ಮಕ್ಕಳಿಂದ ನಾಟಿ

ಗುರುಪುರ: ಕುಪ್ಪೆಪದವಿನ ಕಲ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಎಡಪದವು ಸಮೀಪದ ಪದ್ರೆಂಗಿಯ ಗೋಪಾಲ ಗೌಡರ ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಮಾಡಿದರು.
30 ಕೃಷಿ ಕಾರ್ಮಿಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಾಟಿ ಮಾಡಿದರು. ಮಕ್ಕಳಿಗೆ ಭತ್ತದ ಬೇಸಾಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಖ್ಯ ಶಿಕ್ಷಕಿ ದಿವ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಕಟ್ಟೆಮಾರ್, ಸಮಿತಿ ಸದಸ್ಯರಾದ ಜಯ, ಚಂದ್ರಾವತಿ, ಪಾಲಕರಾದ ಸಿರಾಜುದ್ದೀನ್, ವನಜಾ, ಸಹ ಶಿಕ್ಷಕರಾದ ಉಮೈಹನಿ, ರೇಷ್ಮಾ, ಸೆಲಿಕತ್ ಭಾನು, ಅಡುಗೆ ಸಿಬ್ಬಂದಿ ಚಂದ್ರಾವತಿ, ವಿಮಲಾ ಇದ್ದರು. ಗದ್ದೆ ಮಾಲೀಕ ಗೋಪಾಲ ಗೌಡರು ವಿದ್ಯಾರ್ಥಿಗಳಿಗೆ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು.