ಎಸ್‌ಕೆಪಿಎ ಕಾಪು ವಲಯ ವತಿಯಿಂದ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಮನೋಹರ ಕುಂದರ್ ಹಾಗೂ ಅರುಣಾಚರ ರಾವ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸಂತೋಷ್ ಕಾಪು, ಪ್ರಕಾಶ್ ಆಚಾರ್ಯ ಮತ್ತಿತರರಿದ್ದರು.
ಪಡುಬಿದ್ರಿ: ಛಾಯಾಗ್ರಹಣ ನೆರಳು ಬೆಳಕಿನ ಆಟ. ಛಾಯಾಗ್ರಾಹಕರಿಗೆ ಇಂದು ಸವಾಲಿನ ಹಂತವಾಗಿದೆ. ಛಾಯಾಗ್ರಹಣ ಇತರರಿಗೆ ಸಂತಸ ಉಂಟು ಮಾಡುವ ಕಾರ್ಯವಾಗಿದೆ ಎಂದು ಹಿರಿಯ ಛಾಯಾಗ್ರಾಹಕ ಮನೋಹರ ಕುಂದರ್ ಹೇಳಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ ವತಿಯಿಂದ ಕಾಪುವಿನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಹಿರಿಯ ಛಾಯಾಗ್ರಾಹಕ ಅರುಣಾಚಲ ರಾವ್ ಅವರೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪುತ್ತೂರು ವಲಯದ ವತಿಯಿಂದ ನಡೆದ ಸಾಂಸ್ಕೃತಿಕ ಕಲಾ ವೈಭವದಲ್ಲಿ ಪ್ರಥಮ ಸ್ಥಾನ ಗಳಿಸಿದ ಕಾಪು ವಲಯದ ಛಾಯಾಗ್ರಾಹಕ ಕಲಾವಿದರನ್ನು ಮತ್ತು ಕಾರ್ಯಕ್ರಮ ನಿರ್ದೇಶಕರಾದ ಗಣೇಶ್ ರಾವ್ ಮತ್ತು ಧೀರಜ್ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು.
ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ಉಪಾಧ್ಯಕ್ಷರಾದ ಸಂತೋಷ್ ಕಟಪಾಡಿ, ದೀಪಕ್ ಶೆಣೈ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಕೋಶಾಧಿಕಾರಿ ಕಿರಣ್ ಕಾಪು, ವಲಯ ಛಾಯಾ ಕಾರ್ಯದರ್ಶಿ ಸಂತೋಷ ಅಲೆವೂರು, ಸಾಂಸ್ಕೃತಿಕ ಕಾರ್ಯದರ್ಶಿ ಸತೀಶ್ ಎರ್ಮಾಳು ಉಪಸ್ಥಿತರಿದ್ದರು.
ವಿನೋದ್ ಕಾಂಚನ್ ನಿರೂಪಿಸಿದರು. ವೀರೇಂದ್ರ ಶಿರ್ವ ಮತ್ತು ಪ್ರವೀಣ್ ಕುರ್ಕಾಲು ಸನ್ಮಾನ ಪತ್ರ ವಾಚಿಸಿದರು. ಶ್ರೀನಿವಾಸ್ ಐತಾಳ್ ಸಾಂಸ್ಕೃತಿಕ ಕಾರ್ಯಕ್ರಮದ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಪ್ರಕಾಶ್ ಆಚಾರ್ಯ ವಂದಿಸಿದರು.