ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ನಾಗರಾಜ್ ಶೆಟ್ಟಿ ಉದ್ಘಾಟಿಸಿದರು. ಪ್ರಮುಖರಾದ ಕೆ.ಸದಾಶಿವ, ಕವಿತಾ ಎಂ.ಸಿ., ಕೃಷ್ಣ ಪೂಜಾರಿ ಮತ್ತಿತರರು ಇದ್ದರು.
ಕುಂದಾಪುರ: ವಿದ್ಯಾರ್ಥಿ ದೆಸೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಹಕಾರ, ಭ್ರಾತೃತ್ವ ಮೈಗೂಡಿಸಿಕೊಂಡರೆ ಮುಂದಿನ ಬದುಕು ಸುಮಧುರವಾಗುತ್ತದೆ ಎಂದು ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಶೆಟ್ಟಿ ಹೇಳಿದರು.
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ವಲಯದ ಅರಣ್ಯ ಉಪ ವಿಭಾಗಾಧಿಕಾರಿ ಕೆ.ಸದಾಶಿವ ಮಾತನಾಡಿದರು. ಕಾಲೇಜು ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಶುಭಾಶಂಸನೆಗೈದರು. ಕಾಲೇಜಿನ ಸಂಚಾಲಕ ಎನ್.ಸದಾಶಿವ ನಾಯಕ್, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಾರ್ಥನಾ ಪೈ ಹಾಗೂ ಆದಿತ್ಯ ಪೂಜಾರಿ ಉಪಸ್ಥಿತರಿದ್ದರು.
ಸುಗುಣ ಆರ್.ಕೆ. ಸ್ವಾಗತಿಸಿದರು. ದೀಪಾಲಿ ಪ್ರಾರ್ಥಿಸಿದರು. ಅದಿತಿ ಪ್ರತಿಜ್ಞಾವಿಧಿ ಬೋಧಿಸಿದರು. ವೈಷ್ಣವಿ ಬಿಲ್ಲವ ಮತ್ತು ಪ್ರಾರ್ಥನಾ ಪೈ ಅತಿಥಿಗಳನ್ನು ಪರಿಚಯಿಸಿದರು. ಅಕ್ಷಯ ಆರ್. ನಿರೂಪಿಸಿದರು. ಸುಪ್ರೀತಾ ಆಚಾರ್ ವಂದಿಸಿದರು.