ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ‘ಆವಾರ-ಪುಲಮರ್ದ್‌ದ ಕಜ್ಜಕೊಟ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ.ಸೇಸಪ್ಪ ರೈ, ಕೆ.ಮಹೇಶ್ ಸವಣೂರು, ವೀರೇಂದ್ರ ಮತ್ತಿತರರಿದ್ದರು.  
ಉಡುಪಿ

ಶಿಸ್ತು, ಸಮಯಪ್ರಜ್ಞೆಯಿಂದ ವ್ಯಕ್ತಿತ್ವ ವಿಕಸನ

ಇಂದಿರಾ ಎನ್ ಕೆ
ಕಡಬ: ವ್ಯಕ್ತಿ ಬೆಳೆಯಬೇಕಾದರೆ ಶಿಸ್ತು, ಸಮಯಪ್ರಜ್ಞೆ ಬಹು ಮುಖ್ಯವಾದದ್ದು. ನಿರ್ದಿಷ್ಟ ಗುರಿಯೊಂದಿಗೆ ಪ್ರಯತ್ನಶೀಲರಾದಾಗ ಉತ್ತಮ ಜೀವನ ನಡೆಸಲು ಸಾಧ್ಯ. ವಿದ್ಯಾರ್ಥಿಗಳೆಲ್ಲರೂ ಉತ್ತಮ ಸಂಸ್ಕಾರ ಬೆಳೆಸಿಕೊಂಡು ಉತ್ತಮ ವ್ಯಕ್ತಿಗಳಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಹೇಳಿದರು.
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ನೇತ್ರಾವತಿ ತುಳುಕೂಟ ರಾಮಕುಂಜ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗೋಳಿತೊಟ್ಟು ಹಾಗೂ ಆಲಂಕಾರು ವಲಯ ಸಹಯೋಗದೊಂದಿಗೆ ಸೋಮವಾರ ಶಾಲೆಯಲ್ಲಿ ‘ಆವಾರ-ಪುಲಮರ್ದ್‌ದ ಕಜ್ಜಕೊಟ್ಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಕೆ.ಮಹೇಶ್ ಸವಣೂರು, ಜನಜಾಗೃತಿ ವೇದಿಕೆ ಗೋಳಿತೊಟ್ಟು ವಲಯ ಸದಸ್ಯ ವೀರೇಂದ್ರ, ಯೋಜನೆಯ ಪ್ರಗತಿ ಬಂಧು ರಾಮಕುಂಜ ಒಕ್ಕೂಟ ಅಧ್ಯಕ್ಷ ಪ್ರದೀಪ್ ಬಿ., ಧರ್ಮಸ್ಥಳ ಯೋಜನೆ ಗೋಳಿತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ, ಧರ್ಮಸ್ಥಳ ಯೋಜನೆ ಆಲಂಕಾರು ವಲಯ ಮೇಲ್ವಿಚಾರಕಿ ಸುಜಾತಾ, ಸಂಸ್ಥೆ ವ್ಯವಸ್ಥಾಪಕ ರಮೇಶ್ ರೈ ಉಪಸ್ಥಿತರಿದ್ದರು.
ಪುತ್ತೂರು ಕೇಶವನ ಚಾರಿಟೆಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರವೀಂದ್ರನಾಥ್ ಐತಾಲ್, ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ನಿರಂಜನ್ ರೈ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್. ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತಾ ಎ. ವಂದಿಸಿದರು. ಸಹ ಶಿಕ್ಷಕಿ ಸರಿತಾ ನಿರ್ವಹಿಸಿದರು.