ವೃಕ್ಷ ಪಲ್ಲವ ಕಾರ್ಯಕ್ರಮದಲ್ಲಿ ನೃತ್ಯ ಗುರುಗಳನ್ನು ಗೌರವಿಸಲಾಯಿತು. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ರಶ್ಮಿತಾ ಜೈನ್, ರೂಪೇಶ್ ಕುಮಾರ್ ಇದ್ದರು. 
ಉಡುಪಿ

ಕಲೆ, ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ನೃತ್ಯ ಮತ್ತು ಸಂಗೀತ ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೃತ್ಯದಂತಹ ಲಲಿತಕಲೆಗಳು ಪೂರಕವಾಗಿವೆ. ಶಿಕ್ಷಣದೊಂದಿಗೆ ಕಲೆಗಳು ಮಿಳಿತಗೊಂಡಾಗ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ನೃತ್ಯ ವೃಕ್ಷ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮ ವೃಕ್ಷ ಪಲ್ಲವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮಂಗಳೂರಿನ ಭರತಾಂಜಲಿ ಸಂಸ್ಥೆ ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ಮತ್ತು ಗುರು ಶ್ರೀಧರ ಹೊಳ್ಳ ದಂಪತಿ ಉದ್ಘಾಟಿಸಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಮೂಹದ ಕಾರ್ಯದರ್ಶಿ ರಶ್ಮಿತಾ ಜೈನ್, ಟಾಪ್ ಎಂಟರ್ಟೈನರ್ ಸಂಸ್ಥೆ ರೂಪೇಶ್ ಕುಮಾರ್, ನೃತ್ಯ ವೃಕ್ಷ ಸಂಸ್ಥೆ ನಿರ್ದೇಶಕಿ ಪ್ರಕ್ಷಿಲಾ ಜೈನ್, ಪುರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಕೇಶವ್ ಉಪಸ್ಥಿತರಿದ್ದರು.
ಪ್ರತಿಮಾ ಶ್ರೀಧರ್-ಶ್ರೀಧರ ಹೊಳ್ಳ ದಂಪತಿಯನ್ನು ಸಂಸ್ಥೆಯಿಂದ ಗೌರವಿಸಲಾಯಿತು. ಸಂಸ್ಥೆ ನಿರ್ದೇಶಕಿ ಪ್ರಕ್ಷಿಲಾ ಜೈನ್ ಅವರನ್ನು ಸಂಸ್ಥೆ ವಿದ್ಯಾರ್ಥಿಗಳ ಪಾಲಕರು ಗೌರವಿಸಿದರು. ಪ್ರೊ.ನಿರಂಜನ್, ಶೀತಲ್ ಕುಮಾರ್ ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು. ಸಂಸ್ಥೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು.