ಎಂಸಿಸಿ ಬ್ಯಾಂಕ್ ದೇರಳಕಟ್ಟೆ ಶಾಖೆ ಬ್ಯಾಂಕ್ ಅಧ್ಯಕ್ಷ ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಉದ್ಘಾಟಿಸಿದರು. ಪಾನೀರ್ ಅವರ್ ಲೇಡಿ ಆಫ್ ಮೆರ್ಸಿ ಚರ್ಚ್ ಧರ್ಮಗುರು ವಿಕ್ಟರ್ ಡಿಮೆಲ್ಲೊ, ಆರ್ಸುಲಾಯ್ನ ಫ್ರಾನ್ಸಿಸ್ಕನ್ ಸಭೆಯ ಸುಪೀರಿಯರ್ ಜನರಲ್ ಮಿಲ್ಲಿ ಫರ್ನಾಂಡಿಸ್, ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಆಡಳಿತಾಧಿಕಾರಿ ನಿಲೇಶ್ ಕ್ರಾಸ್ತಾ ಉಪಸ್ಥಿತರಿದ್ದರು.  
ಉಡುಪಿ

ಅಭಿವೃದ್ಧಿ ಮುಖ್ಯ ಗುರಿಯಾಗಿಸಿ ಕಾರ್ಯನಿರ್ವಹಣೆ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಎರಡನೇ ಶತಕದತ್ತ ಸಾಗುತ್ತಿರುವ ಎಂಸಿಸಿ ಬ್ಯಾಂಕ್ ಇದುವರೆಗೆ ಜನರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಬಂದಿದೆ. ಗ್ರಾಹಕರ ಸರ್ವತೋಮುಖ ಬೆಳವಣಿಗೆ, ಸಮುದಾಯದ ಅಭಿವೃದ್ಧಿಯನ್ನು ಮುಖ್ಯ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದರು.
ದೇರಳಕಟ್ಟೆ ಫಾದರ್ ಮುಲ್ಲರ್ ಕಟ್ಟಡ ಸಂಕೀರ್ಣದಲ್ಲಿ ಭಾನುವಾರ ಎಂಸಿಸಿ ಬ್ಯಾಂಕ್‌ನ 22ನೇ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್ಸುಲಾಯ್ನ ಫ್ರಾನ್ಸಿಸ್ಕನ್ ಸಭೆಯ ಸುಪೀರಿಯರ್ ಜನರಲ್ ಮಿಲ್ಲಿ ಫರ್ನಾಂಡಿಸ್ ಮಾತನಾಡಿ, 114 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್, ಪ್ರಮುಖ ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪಾನೀರ್ ಅವರ್ ಲೇಡಿ ಆಫ್ ಮೆರ್ಸಿ ಚರ್ಚ್ ಧರ್ಮಗುರು ವಿಕ್ಟರ್ ಡಿಮೆಲ್ಲೊ ಆಶೀರ್ವಚನ ನೀಡಿದರು. ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಆಡಳಿತಾಧಿಕಾರಿ ನಿಲೇಶ್ ಕ್ರಾಸ್ತಾ, ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸುನೀಲ್ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ರೋಶನ್ ಡಿಸೋಜ ಸ್ವಾಗತಿಸಿದರು. ಕುಲಶೇಖರ ಶಾಖಾ ವ್ಯವಸ್ಥಾಪಕಿ ಶೈನಿ ಲಸ್ರಾದೋ ಸಾಧಕ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಜುಲೆಟ್ ಡಿಸೋಜ ವಂದಿಸಿದರು. ಶೈನಿ ವಿಭಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಬ್ಯಾಂಕ್‌ಗೆ ಗ್ರಾಹಕರೇ ದೇವರು. ಗ್ರಾಹಕರ ಬಟ್ಟೆ, ಮುಖ ನೋಡದೆ ಎಲ್ಲರಿಗೂ ಉತ್ತಮ ಸೇವೆ ನೀಡುವಂತಾಗಬೇಕು. ಅವಿದ್ಯಾವಂತರು ಬ್ಯಾಂಕಿಗೆ ಬಂದಾಗ ಸಹಾಯ ನೀಡುವಂತಾಗಬೇಕು. ಎಂಸಿಸಿ ಬ್ಯಾಂಕ್ ಶಾಖೆಯ ಆರಂಭ ಮಹತ್ವದ ಮೈಲುಗಲ್ಲು, ಬ್ಯಾಂಕ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಲಿ.