ಕಸ್ತೂರಿ ರಂಗನ್ ವರದಿ ಸಮಾಲೋಚನಾ ಸಭೆಯಲ್ಲಿ ಹಿರಿಯ ವಕೀಲ ಟಿ.ಬಿ.ಶೆಟ್ಟಿ ಮಾತನಾಡಿದರು. ಪ್ರಮುಖರಾದ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಕೆ.ಬಾಬು ಶೆಟ್ಟಿ, ಎಸ್.ರಾಜು ಪೂಜಾರಿ ಮೊದಲಾದವರಿದ್ದರು.
ಬೈಂದೂರು: ಕಳೆದ ಹಲವು ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಆತಂಕ ಮಲೆನಾಡು ಭಾಗದ ಮತ್ತು ಕರಾವಳಿಯ ರೈತರನ್ನು ಕಾಡುತ್ತಿದೆ. 2013ರಿಂದ ಇಲ್ಲಿಯವರೆಗೆ ಏಳು ಅಧಿಸೂಚನೆ ಬಂದಿದೆ. ಗ್ರಾಮೀಣ ಭಾಗದ ರೈತರ ಆತಂಕಕ್ಕೆ ಜನಪ್ರತಿನಿಧಿಗಳೇ ನೇರ ಹೊಣೆ ಎಂದು ಹಿರಿಯ ವಕೀಲ ಟಿ.ಬಿ.ಶೆಟ್ಟಿ ಹೇಳಿದರು.
ಬೈಂದೂರಿನಲ್ಲಿ ತಾಲೂಕು ರೈತ ಸಂದ ಕಸ್ತೂರಿ ರಂಗನ್ ವರದಿ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕೇರಳ, ಗುಜರಾತ್ ಸರ್ಕಾರ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರತ್ಯೇಕ ಸರ್ವೇ ನಡೆಸಿ ಕೇವಲ ದಟ್ಟಕಾಡುಗಳಿರುವ ಜಾಗಗಳನ್ನು ವಾತ್ರ ಸೂಕ್ಷ್ಮವಲಯಕ್ಕೆ ಸೇರ್ಪಡೆಗೆ ಅವಕಾಶ ಕೊಟ್ಟಿದೆ. ಆದರೆ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಯ ಜನನಾಯಕರು ವರದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ಬೈಂದೂರು ತಾಲೂಕು ರೈತ ಸಂದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಜಿ.ಪಂ. ವಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಜಿ.ಪಂ. ವಾಜಿ ಸದಸ್ಯ ಸುರೇಶ ಬಟ್ವಾಡಿ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ.ಪಡುವರಿ, ರೋಟರಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು. ವೀರಭದ್ರ ಗಾಣಿಗ ನಿರೂಪಿಸಿದರು.
ಕೇರಳದಲ್ಲಿ ಆರಂಭದಲ್ಲಿ 13108.59 ಕಿ.ಮೀ ಅಧಿಸೂಚನೆ ಬಂದಿದು,್ದ ಬಳಿಕ ರಾಜ್ಯ ಸರ್ಕಾರ ಆ ಮಿತಿಯನ್ನು 9993 ಕಿ.ಮೀ.ಇಳಿಸಿದೆ. ಗುಜರಾತ್ ಕೇವಲ 490.59 ಕಿ.ಮೀ. ವಾತ್ರ ಒಳಪಟ್ಟಿದೆ. ಗೋವಾ 1461 ಕಿ.ಮೀ. ಆದರೆ ಕರ್ನಾಟಕದಲ್ಲಿ 20668 ಚ.ಕಿ.ಮೀ. ಒಳಪಟ್ಟಿದೆ. ಯಾವ ಹಂತದಲ್ಲೂ ಇದಕ್ಕೆ ಆಕ್ಷೇಪ ಸಲ್ಲಿಕೆಯಾಗಿಲ್ಲ. ಹೀಗಾಗಿ ಕರಾವಳಿ ಭಾಗದ ಜನಪ್ರತಿನಿಧಿಗಳ ಪಕ್ಷಭೇದ ಮರೆತು ರಾಜ್ಯ ಸರ್ಕಾರದ ಗಮನ ಸೆಳೆದು ಭೌತಿಕ ಸರ್ವೇ ನಡೆಸಿದಾಗ ಮಾತ್ರ ಗ್ರಾಮೀಣ ಭಾಗಗಳು ಉಳಿಯಲಿವೆ.
— ಟಿ.ಬಿ.ಶೆಟ್ಟಿ, ಹಿರಿಯ ವಕೀಲ