ಕಟಪಾಡಿಯಲ್ಲಿನ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಎಎಸ್‌ಐ ದಯಾನಂದ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಅಜ್ಮತ್ ಆಲಿ, ಪ್ರಭಾ ಶೆಟ್ಟಿ, ತೇಜಸ್ವಿ, ಡೇನಿಯಲ್ ಡೊಮ್ನಿಕ್, ಪ್ರಭಾಕರ್, ದುಗ್ಗಪ್ಪ, ಪ್ರಭಾಕರ ಶೇರಿಗಾರ್, ಗಣೇಶ್ ಕುಮಾರ್, ರಮೇಶ್ ಕೋಟ್ಯಾನ್ ಮತ್ತಿತರರಿದ್ದರು.  
ಉಡುಪಿ

ಕಾನೂನು ಚೌಕಟ್ಟಿನೊಳಗೆ ಜನಸ್ನೇಹಿ ಕಾರ್ಯ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸಾರ್ವಜನಿಕ ಸೇವೆಯಲ್ಲಿರುವ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗೃಹರಕ್ಷಕದಳದ ಸಿಬ್ಬಂದಿ ಸೇವೆಯನ್ನು ನಾಗರಿಕರು ಗುರುತಿಸುವ ಗೌರವಿಸುವ ಕಾರ್ಯ ಇಲಾಖೆಗೆ ಹೆಮ್ಮೆ ತರುವಂಥದ್ದಾಗಿದೆ. ಕಾನೂನು ಚೌಕಟ್ಟಿನೊಳಗೆ ಸಮಾಜದೊಂದಿಗೆ ಜನಸ್ನೇಹಿಯಾಗಿ ಸರ್ಕಾರಿ ಸಿಬ್ಬಂದಿ ಕೆಲಸ ಮಾಡಿದಾಗ ಮಾತ್ರ ಇಂತಹ ಗೌರವಗಳು ದೊರೆಯಲು ಸಾಧ್ಯ ಎಂದು ಕಾಪು ಪೊಲೀಸ್ ವೃತ್ತನಿರೀಕ್ಷಕ ಅಜ್ಮತ್ ಆಲಿ ಹೇಳಿದರು.
ಕಟಪಾಡಿಯ ವಿವಿಧ ಸಂಘ-ಸಂಸ್ಥೆಗಳು ಮತ್ತು ಸಮಸ್ತ ನಾಗರಿಕರ ಸಹಯೋಗದಲ್ಲಿ ಕಟಪಾಡಿ ಗ್ರಾಪಂ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕಟಪಾಡಿ ಹೊರಠಾಣೆಯಲ್ಲಿ ಉಪಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿರುವ ಎಎಸ್‌ಐ ದಯಾನಂದ್ ಅವರ ಬೀಳ್ಕೊಡುಗೆ ಮತ್ತು ನಾಗರಿಕ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕಟಪಾಡಿಯಲ್ಲಿ ಸೇವೆ ಸಲ್ಲಿಸಿರುವ ಗ್ರಾಪಂ ಲೆಕ್ಕಸಹಾಯಕ ವಿಜಯ್ ಉದ್ಯಾವರ, ಏಣಗುಡ್ಡೆ ಗ್ರಾಮದ ನಿವೃತ್ತ ಗ್ರಾಮ ಸಹಾಯಕ ಸದಾನಂದ ಎಸ್.ಬಂಗೇರ, ಮಲ್ಪೆ ಪೊಲೀಸ್ ಠಾಣಾ ಎಎಸ್‌ಐ ರುಕ್ಮಯಾ, ಉಡುಪಿ ಸಂಚಾರಿ ಪೊಲೀಸ್ ಠಾಣಾ ಹೆಡ್ ಕಾನ್‌ಸ್ಟೆಬಲ್ ಮೋಹನ್ ಚಂದ್ರ, ಗೃಹರಕ್ಷಕ ದಳದ ಸಿಬ್ಬಂದಿ ಲಕ್ಷ್ಮೀನಾರಾಯಣ ರಾವ್, ಸೋಮನಾಥ ಸೇರ್ವೇಗಾರ್, ಪುಷ್ಪಾ ದೇವಾಡಿಗ, ಲಕ್ಷ್ಮೀ ಸಾಲ್ಯಾನ್, ಕಾಮಿನಿ ಅವರನ್ನು ಸನ್ಮಾನಿಸಲಾಯಿತು.
ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ ಪೈ ಮಾತನಾಡಿದರು. ಕಟಪಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಪ್ರಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಪೊಲೀಸ್ ಠಾಣಾಧಿಕಾರಿ ತೇಜಸ್ವಿ ಐ., ಪ್ರೊಬೆಷನರಿ ಎಸ್‌ಐ ಮಹಮ್ಮದ್ ಶಿಫಾಜ್, ಕಟಪಾಡಿಯ ವೈದ್ಯರಾದ ಡಾ.ಯು.ಕೆ.ಶೆಟ್ಟಿ, ಡಾ.ಎ.ರವೀಂದ್ರನಾಥ ಶೆಟ್ಟಿ, ಕಲಾವತಿ ದಯಾನಂದ್, ವೈಶಾಲಿ ರುಕ್ಮಯ, ರವಿಕಲಾ, ಗ್ರಾಮ ಕರಣಿಕ ಡೇನಿಯಲ್ ಡೊಮ್ನಿಕ್ ಡಿಸೋಜ, ಕಟಪಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭಾಕರ್ ಪಾಲನ್, ಕಟಪಾಡಿ ವರ್ತಕರ ಸಂಘದ ಅಧ್ಯಕ್ಷ ದುಗ್ಗಪ್ಪ ಜಿ.ಬಂಗೇರ, ದೇವಾಡಿಗರ ಸಂಘದ ಅಧ್ಯಕ್ಷ ಪ್ರಭಾಕರ್ ಶೇರಿಗಾರ್, ಅಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಗಣೇಶ್ ಕುಮಾರ್ ಮಟ್ಟು, ಕಾರ್ಯದರ್ಶಿ ಹನೀಫ್, ಕಾರು ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಕೋಟ್ಯಾನ್, ಶ್ರೀಗುರು ಮಹಿಳಾ ಬಳಗದ ಅಧ್ಯಕ್ಷೆ ಆಶಾ ಅಂಚನ್, ಬಂಟರ ಸಂಘದ ಅಧ್ಯಕ್ಷ ದಯಾನಂದ್ ಶೆಟ್ಟಿ, ಕಟಪಾಡಿ ಜೆಸಿಐ ಉಪಾಧ್ಯಕ್ಷ ಕಾರ್ತಿಕ್ ಡಿ., ಟೆಂಪೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಜಾನ್ ಅಮ್ಮಣ್ಣ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಕಾಮರಾಜ್ ಸುವರ್ಣ, ಕಟಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಶೋಕ್ ರಾವ್, ಮಹೇಶ್ ಎನ್.ಅಂಚನ್, ಸುಭಾಸ್ ಬಲ್ಲಾಳ್, ಹರೀಶ್ಚಂದ್ರ ಕಟಪಾಡಿ, ಮಹಮ್ಮದ್ ನಯೀಮ್ ಉಪಸ್ಥಿತರಿದ್ದರು.
ಕಟಪಾಡಿ ಎಸ್.ವಿ.ಎಸ್.ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಟಪಾಡಿ ಗ್ರಾಪಂ ಪಿಡಿಒ ತಿಲಕ್‌ರಾಜ್ ಸ್ವಾಗತಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ನಿರೂಪಿಸಿದರು. ಸುಧೀರ್ ಡಿ.ಬಂಗೇರ ವಂದಿಸಿದರು.