‘ನಮ್ಮ ನಡಿಗೆ ಮುಡಿಪು ಪುಣ್ಯಕ್ಷೇತ್ರದ ಕಡೆಗೆ’ ಆಧ್ಯಾತ್ಮಿಕ ಜಾಥಾಕ್ಕೆ ಪಾನೀರ್ ಚರ್ಚ್ ಧರ್ಮಗುರು ವಿಕ್ಟರ್ ಡಿಮೆಲ್ಲೋ ಚಾಲನೆ ನೀಡಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ಫಾದರ್ ಸಿಪ್ರಿಯನ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಭಕ್ತಿಪೂರ್ವ ನಡಿಗೆಯಿಂದ ಜನರಿಗೆ ನೆಮ್ಮದಿ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪಾನೀರ್ ಚರ್ಚ್‌ನಿಂದ ಮುಡಿಪು ಚರ್ಚ್‌ವರೆಗಿನ ಭಕ್ತಿಪೂರ್ವ ನಡಿಗೆಯಿಂದ ಕೇವಲ ಪಾಲ್ಗೊಂಡವರಿಗೆ ಮಾತ್ರವಲ್ಲದೆ ಊರಿಗೆ ಶಾಂತಿ, ನೆಮ್ಮದಿ ಲಭಿಸಲಿದೆ. ಪ್ರತಿಯೊಂದು ಹೆಜ್ಜೆ ಭಕ್ತಿ ಪೂರ್ವಕ ಆಗಿರಲಿದ್ದು ದೇವರು ಉತ್ತರ ಕೊಡುವುದರಲ್ಲಿ ಸಂಶಯವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ‘ನಮ್ಮ ನಡಿಗೆ ಮುಡಿಪು ಪುಣ್ಯಕ್ಷೇತ್ರದ ಕಡೆಗೆ’ ಆಧ್ಯಾತ್ಮಿಕ ಜಾಥಾಕ್ಕೆ ಪಾನೀರ್ ಮೆರ್ಸಿಯಮ್ಮ ಚರ್ಚ್ ಬಳಿ ಚಾಲನೆ ನೀಡಿ ಮಾತನಾಡಿದರು.
ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ಆಶೀರ್ವಚನ ನೀಡಿದರು. ಪಾನೀರ್ ಚರ್ಚ್ ಧರ್ಮಗುರು ವಿಕ್ಟರ್ ಡಿಮೆಲ್ಲೋ ನಡಿಗೆಗೆ ಚಾಲನೆ ನೀಡಿದರು. ಮುಡಿಪು ಚರ್ಚ್ ಪ್ರಧಾನ ಧರ್ಮಗುರು ಆಸಿಸ್ಸಿ ರೆಬೆಲ್ಲೋ, ಬೋಳ ಚರ್ಚ್ ಧರ್ಮಗುರು ಪೀಟರ್ ಡಿಸೋಜ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಕೆಥೊಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಸಂತೋಷ್ ಡಿಸೋಜ, ಪಿಆರ್‌ಒ ರಾಲ್ಫಿ ಡಿಕೋಸ್ತ, ಕಾರ್ಯದರ್ಶಿ ವಿಲ್ಮಾ ಮೊಂತೆರೋ, ಪತ್ರಕರ್ತ ವಾಲ್ಟರ್ ನಂದಳಿಕೆ, ಪಾನೀರ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಉರ್ಬನ್ ಫೆರಾವೋ, ಕಾರ್ಯದರ್ಶಿ ವಿನ್ನಿ ಕುಟಿನ್ಹಾ, ಮುಡಿಪು ಸಂತ ಜೋಸೆಫ್ ವಾಝ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅರುಣ್ ಡಿಸೋಜ, ಕಾರ್ಯದರ್ಶಿ ರೋಶನ್ ಡಿಸೋಜ, ಕೆಥೊಲಿಕ್ ಸಭಾ ದಕ್ಷಿಣ ವಲಯ ಕಾರ್ಯದರ್ಶಿ ಟ್ರೆಸ್ಸಿ ರೋಡ್ರಿಗಸ್, ಪಾನೀರ್ ಘಟಕಾಧ್ಯಕ್ಷ ಐವನ್ ಮೊಂತೆರೋ ಉಪಸ್ಥಿತರಿದ್ದರು. ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಡಾಲ್ಫಿ ಡಿಸೋಜ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಆಲ್ವಿನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಥೋಲಿಕ್ ಸಭಾ ಕೋಶಾಧಿಕಾರಿ ಫೆಲಿಕ್ಸ್ ಡಿಸೋಜ ಅಮ್ಮೆಂಬಳ ನಿರೂಪಿಸಿದರು.

ಯೇಸುವಿನ ತ್ಯಾಗಮಯ ಜೀವನ ಸ್ಮರಿಸುತ್ತಾ ಇಂದು ನಮಗೆ ಎದುರಾಗಿರುವ ಸವಾಲು ಎದುರಿಸಲು ಆಧ್ಯಾತ್ಮಿಕ ನಡಿಗೆ ಇದಾಗಿದೆ. ಯೇಸು ಕ್ರಿಸ್ತರ ಮಾರ್ಗದಲ್ಲಿ ಜೀವಿಸಿದ ಸಂತ ಜೋಸೆಫ್ ವಾಝ್ ಅವರ ತ್ಯಾಗ, ಧೈರ್ಯ, ಸೇವೆ ನಮಗೆ ಆದರ್ಶ.