ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಮೂಳೆ ಮಜ್ಜೆಯ ಕಸಿ ಕೇಂದ್ರ ಉದ್ಘಾಟಿಸಲಾಯಿತು. ಡಾ. ಎಚ್.ಎಸ್. ಬಲ್ಲಾಳ್, ಡಾ. ಅಶೋಕ್ ಗವಾಂಡೆ, ಡಾ. ಆನಂದ್ ವೇಣುಗೋಪಾಲ್, ಡಾ. ಅವಿನಾಶ್ ಶೆಟ್ಟಿ, ಡಾ. ಅನಿಲ್ ಕೆ. ಭಟ್, ಹರಿನಾರಾಯಣ್ ಶಮಾರ್, ಡಾ. ವಾಸುದೇವ ಭಟ್ ಕೆ., ಗಿರೀಶ್ ನಾಯರ್ ಇತರರಿದ್ದರು.
* ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅನಿಸಿಕೆ
* ಕೆಎಂಸಿಯಲ್ಲಿ ಮಕ್ಕಳ ಮೂಳೆ ಮಜ್ಜೆಯ ಕಸಿ ಕೇಂದ್ರ ಉದ್ಘಾಟನೆ
ಉಡುಪಿ: ಅನಾರೋಗ್ಯಕ್ಕೊಳಗಾದ ಮಕ್ಕಳು ಮತ್ತು ಅವರ ಕುಟುಂಬಕ್ಕೆ ಕಷ್ಟದ ಸಮಯದಲ್ಲಿ ಸಹಕರಿಸುವುದು ನಮ್ಮ ಸಂಸ್ಥೆಯ ಸಂಸ್ಥಾಪಕ ಡಾ. ಟಿಎಂಎ ಪೈ ಅವರ ಮೌಲ್ಯ ಮತ್ತು ದೃಷ್ಟಿಕೋನವಾಗಿತ್ತು. ಆರೋಗ್ಯ ಸೇವೆಯು ವೈದ್ಯಕೀಯ ಚಿಕಿತ್ಸೆಯನ್ನೂ ಮೀರಿದ್ದು ಎನ್ನುವುದನ್ನು ನಾವು ಯಾವಾಗಲೂ ನಂಬಿದ್ದೇವೆ. ಆ ಉದ್ದೇಶದಿಂದಲೇ ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗೆ ಒಳಗಾಗುವ ಮಕ್ಕಳಿಗೆ ಸುರಕ್ಷತೆ ಮತ್ತು ಕಾಳಜಿ ತೋರುವ ಕೇಂದ್ರ ತೆರೆಯಲು ಕೆಎಂಸಿಯಲ್ಲಿ ಸ್ಥಳಾವಕಾಶ ಒದಗಿಸಲಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ತಿಳಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೂಳೆ ಮಜ್ಜೆಯ ಕಸಿ ಮಾಡಿಸಿಕೊಳ್ಳುವ ಮಕ್ಕಳಿಗೆ ಮೀಸಲಾಗಿ ಆಕ್ಸೆಸ್ ಲೈಫ್, ಮಾಹೆ ಮತ್ತು ಚೆಲ್ಲಾರಾಮ್ ಫೌಂಡೇಷನ್ ಸಹಭಾಗಿತ್ವದಲ್ಲಿ ಆರಂಭಿಸಲಾದ 'ಹೋಮ್ ಅವೇ ಫ್ರಮ್ ಹೋಮ್' ಸೌಲಭ್ಯದ ಕರ್ನಾಟಕದ ಮೊದಲ ಕೇಂದ್ರವನ್ನು ಶನಿವಾರ (ಮೇ 23) ಉದ್ಘಾಟಿಸಿ ಮಾತನಾಡಿದರು.
ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆಯ ಕಸಿ ಕೇಂದ್ರವನ್ನು ಡಾ. ಎಚ್.ಎಸ್. ಬಲ್ಲಾಳ್ ಉದ್ಘಾಟಿಸಿದರು. ಮುಂಬೈನ ಚೆಲ್ಲಾರಾಮ್ ಫೌಂಡೇಷನ್ನ ಭಾರತದ ಮುಖ್ಯಸ್ಥ ಡಾ. ಅಶೋಕ್ ಗವಾಂಡೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅನಿಲ್ ಕೆ. ಭಟ್, ಮಣಿಪಾಲ ಫೌಂಡೇಷನ್ನ ಸಿಇಒ ಹರಿನಾರಾಯಣ್ ಶರ್ಮಾ, ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ., ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಷನ್ನ ಸ್ಥಾಪಕಾಧ್ಯಕ್ಷ ಗಿರೀಶ್ ನಾಯರ್, ಸಹಸಂಸ್ಥಾಪಕ ಅಂಕಿತ್ ದೇವ್ ಉಪಸ್ಥಿತರಿದ್ದರು.
ಮಾಹೆ ಸಹಭಾಗಿತ್ವದ 2ನೇ ಘಟಕ
ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗಳಿಗೆ ಒಳಗಾಗುವ ಮಕ್ಕಳಿಗಾಗಿ ವಿಶೇಷವಾಗಿ 10 ಘಟಕಗಳ ಸೌಲಭ್ಯ ವಿನ್ಯಾಸಗೊಳಿಸಲಾಗಿದೆ, ಚಿಕಿತ್ಸೆ ಮತ್ತು ಚೇತರಿಕೆಯ ಸಮಯದಲ್ಲಿ ರೋಗನಿರೋಧಕ ಶಕ್ತಿ ತೀವ್ರವಾಗಿ ದುರ್ಬಲಗೊಳ್ಳುತ್ತವೆ. ಈ ಸಂದರ್ಭದಲ್ಲಿ ಸುರಕ್ಷತೆ, ನೈರ್ಮಲ್ಯ ಮತ್ತು ನಿಯಂತ್ರಿತ ವಾತಾವರಣ ಬಹಳ ಮುಖ್ಯವಾಗಿದ್ದು, ಈ ಕೇಂದ್ರ ಪೂರಕವಾಗಿದೆ. ಇದು ಮಾಹೆ ಸಹಭಾಗಿತ್ವದ ಆಕ್ಸೆಸ್ ಲೈಫ್ನ ಎರಡನೇ ಕೇಂದ್ರವಾಗಿದೆ. ಆಸ್ಪತ್ರೆ ಮೂಲಸೌಕರ್ಯವನ್ನೂ ಮೀರಿ ಮಕ್ಕಳ ಕ್ಯಾನ್ಸರ್ ಆರೈಕೆ ಮತ್ತು ಕುಟುಂಬ ಬೆಂಬಲ ಸೇವೆಗಳ ಸಮಗ್ರ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ.
"
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಲ್ಲಿರುವ ಈ ಕೇಂದ್ರವು ನಮ್ಮ ಪ್ರಯಾಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು. ವಸತಿ, ಪೋಷಣೆ ಅಥವಾ ವೈದ್ಯಕೀಯೇತರ ಸವಾಲುಗಳಿಂದಾಗಿ ಯಾವುದೇ ಮಗುವು ಕ್ಯಾನ್ಸರ್ ಚಿಕಿತ್ಸೆಯಿಂದ ವಂಚಿತವಾಗಬಾರದು ಎನ್ನುವುದು ನಮ್ಮ ಉದ್ದೇಶ. ಅದಕ್ಕೆ ಈ ಕೇಂದ್ರವು ಖಚಿತ ವಿಶ್ವಾಸವಾಗಿದೆ.
— ಗಿರೀಶ್ ನಾಯರ್. ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಷನ್ನ ಸಂಸ್ಥಾಪಕ ಅಧ್ಯಕ್ಷ.