ಎಸ್ಡಿಎಂ ಕಾಲೇಜಿನಲ್ಲಿ ವೈದ್ಯರಿಗಾಗಿ ಪಂಚಕರ್ಮ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಡಾ. ಮಮತಾ ಕೆ.ವಿ., ಡಾ. ನಿರಂಜನ್ ರಾವ್, ಡಾ. ನಾಗರಾಜ್ ಎಸ್., ಡಾ. ದೀಪಕ್ ಎಸ್.ಎಂ., ಡಾ. ಮಂಜುನಾಥ ಕಂಠಿ, ನಿಶಾಂತ್ ಪೈ, ಡಾ.ಅಂಬಿಕಾ ನಾಯಕ್, ಡಾ. ರಾಜಲಕ್ಷ್ಮೀ ಎಂ.ಜಿ., ಡಾ. ಪದ್ಮಕಿರಣ್ ಸಿ., ಡಾ.ತುಳಸಿ ಟಿ.ವಿ. ಇತರರಿದ್ದರು.
* ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅಭಿಮತ
* ಎಸ್ಡಿಎಂ ಕಾಲೇಜಿನಲ್ಲಿ ವೈದ್ಯರಿಗೆ ಪಂಚಕರ್ಮ ಶಿಬಿರ
ಉಡುಪಿ: ರಾಷ್ಟ್ರೀಯ ಮಟ್ಟದ ಸೆಮಿನಾರ್ಗಳಲ್ಲಿ ನೀಡುವಂತಹ ವೈದ್ಯಕೀಯ ತರಬೇತಿಯನ್ನು ಎಸ್ಡಿಎಂ ಸಂಸ್ಥೆಯಲ್ಲಿ ಸಾಮಾನ್ಯ ಹ್ಯಾಂಡ್ಸ್ಆನ್ ಅಧಿವೇಶನಗಳಲ್ಲಿಯೇ ಅದೇ ಮಾನದಂಡ ಮತ್ತು ಗುಣಮಟ್ಟದಲ್ಲಿ ನೀಡಲಾಗುತ್ತದೆ. ಎಸ್ಎಂ ಸಂಸ್ಥೆಯು ಗುಣಮಟ್ಟದ ಶಿಕ್ಷಣ ಮತ್ತು ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಅದಕ್ಕೆ ಇಲ್ಲಿನ ಪಂಚಕರ್ಮ ಚಿಕಿತ್ಸೆಯ ಪ್ರಾಯೋಗಿಕ ತರಬೇತಿಯೇ ನಿದರ್ಶನವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ತಿಳಿಸಿದರು.
ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪಂಚಕರ್ಮ ವಿಭಾಗದ ವತಿಯಿಂದ ವೈದ್ಯರಿಗಾಗಿ ಆಯೋಜಿಸಿದ್ದ ಪಂಚಕರ್ಮ ಪ್ರಾಯೋಗಿಕ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್., ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಎಸ್.ಎಂ. ಉಪಸ್ಥಿತರಿದ್ದರು. ಶಿಬಿರದಲ್ಲಿ 30 ವೈದ್ಯರು ಭಾಗವಹಿಸಿದ್ದರು.
ಆಸ್ಪತ್ರೆಯ ಹಿರಿಯ ವೈದ್ಯ ಡಾ. ನಿಶಾಂತ್ ಪೈ, ಆಯುರ್ ಪ್ರೋ ಚಿಕಿತ್ಸಾಲಯದ ಡಾ.ಅಂಬಿಕಾ ನಾಯಕ್, ಪಂಚಕರ್ಮ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಲಕ್ಷ್ಮೀ ಎಂ.ಜಿ., ಡಾ. ಪದ್ಮಕಿರಣ್ ಸಿ., ಸಹಪ್ರಾಧ್ಯಾಪಕಿ ಡಾ.ತುಳಸಿ ಟಿ.ವಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪಂಚಕರ್ಮ ವಿಭಾಗದ ಸಹಪ್ರಾಧ್ಯಾಪಕ ಡಾ. ಮಂಜುನಾಥ ಕಂಠಿ ಸ್ವಾಗತಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಪಂಚಕರ್ಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ನಿರಂಜನ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತರ ವಿಭಾಗದ ವಿದ್ಯಾರ್ಥಿನಿ ಡಾ. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ಜ್ಞಾನ ಸಂಯೋಜನೆಯಿಂದ ಉತ್ತಮ ಸೇವೆ
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಖಿಲ ಭಾರತೀಯ ಆಯುರ್ವೇದ ವಿದ್ಯಾಲಯದ ಪ್ರೊಫೆಸರ್ ಎಮೆರೀಟಸ್ ಶ್ರೀನಿವಾಸ ಆಚಾರ್ಯ ಹೆಜಮಾಡಿ ಮಾತನಾಡಿ, ವೈದ್ಯ ವೃತ್ತೀಜಿವನದಲ್ಲಿ ನಿರಂತರ ಅಧ್ಯಯನ ಮನೋಭಾವ ಅಗತ್ಯ. ಇಂತಹ ವೈಜ್ಞಾನಿಕ ತರಬೇತಿ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ ತಮ್ಮ ವೈದ್ಯಕೀಯ ಅಭ್ಯಾಸದಲ್ಲಿಯೂ ಅಳವಡಿಸಿಕೊಳ್ಳಬೇಕು. ಪ್ರಾಯೋಗಿಕ ಅನುಭವದೊಂದಿಗೆ ಜ್ಞಾನ ಸಂಯೋಜಿಸುವುದರಿಂದ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದರು. ವಿದ್ಯಾರ್ಥಿಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಡಾ. ನಾಗರಾಜ್ ಎಸ್. ಉಪಸ್ಥಿತರಿದ್ದರು. ಡಾ. ರಾಜಲಕ್ಷ್ಮೀ ಎಂ.ಜಿ. ಸ್ವಾಗತಿಸಿದರು. ಡಾ. ನಿರಂಜನ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಂಜುನಾಥ ಕಂಠಿ ವಂದಿಸಿದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ನೈನಿಕಾ ಕಾರ್ಯಕ್ರಮ ನಿರೂಪಿಸಿದರು.