ಉಡುಪಿಯ ಇಂದ್ರಾಳಿ ಯಕ್ಷಗಾನ ಕೇಂದ್ರದ ಅಧ್ಯಕ್ಷರಾಗಿ ನೇಮಕಗೊಂಡ ಪಳ್ಳಿ ಕಿಶನ್ ಹೆಗ್ಡೆ.
* ಸಲಹಾ ಸಮಿತಿ ಪುನರ್ ರಚನೆ
ಉಡುಪಿ: ಯಕ್ಷಗಾನ ಕೇಂದ್ರ, ಇಂದ್ರಾಳಿ (ಮಾಹೆ)ಯ ಸಲಹಾ ಸಮಿತಿಯನ್ನು ಮುಂದಿನ 2 ವರ್ಷದ ಅವಧಿಗೆ ಮಾಹೆ ವಿಶ್ವವಿದ್ಯಾಲಯ ಪುನರ್ ರಚಿಸಿದ್ದು ಅಧ್ಯಕ್ಷರಾಗಿ ಬಹುಮೇಳಗಳ ಯಜಮಾನ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆದ ಪಳ್ಳಿ ಕಿಶನ್ ಹೆಗ್ಡೆ ನೇಮಕವಾಗಿದ್ದಾರೆ.
ಕೇಂದ್ರ ಸದಸ್ಯರಾಗಿ ಯು.ವಿಶ್ವನಾಥ ಶೆಣೈ, ಭುವನ ಪ್ರಸಾದ್ ಹೆಗ್ಡೆ, ಮಂಜುನಾಥ ಮಯ್ಯ, ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ, ವಿ.ಜಿ. ಶೆಟ್ಟಿ, ಡಾ. ತಲ್ಲೂರು ಶಿವರಾಂ ಶೆಟ್ಟಿ, ಮೀನಲಕ್ಷಿಣಿ ಅಡ್ಯಂತಾಯ, ಡಾ. ಶೈಲಜಾ ಹಾಗೂ ಕಾರ್ಯದರ್ಶಿಯಾಗಿ ಡಾ. ಬಿ.ಜಗದೀಶ್ ಶೆಟ್ಟಿ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.