ಉಡುಪಿಯಲ್ಲಿ ಜೆಸಿಐ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರಿಗೆ 'ಉಡುಪಿ ಕಣ್ಮಣಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಲ್ಲವಿ ಕೊಡಗು, ಮಹಮ್ಮದ್​ ಸುಹಾನ್​, ಜಯಕರ್​ ಶೆಟ್ಟಿ ಇಂದ್ರಾಳಿ, ಡಾ. ಹರಿಣಾಕ್ಷಿ ಕರ್ಕೇರ ಇತರರಿದ್ದರು. 
ಉಡುಪಿ

ಜೆಸಿಐ ಉಡುಪಿ ಸಿಟಿ ಅಧ್ಯಕ್ಷೆಯಾಗಿ ಪಲ್ಲವಿ ಕೊಡಗು

ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ

ಉಡುಪಿ: ಜೆಸಿಐ ಉಡುಪಿ ಸಿಟಿಯ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಿತ್ಯಾನಂದ ಆರ್ಕೆಡ್​ನಲ್ಲಿ ನಡೆಯಿತು. ಘಟಕದ 24ನೇ ಅಧ್ಯಕ್ಷೆಯಾಗಿ ಖ್ಯಾತ ರಂಗಕರ್ಮಿ ಬಾಸುಮ ಕೊಡಗು ದಂಪತಿ ಪುತ್ರಿ ಪಲ್ಲವಿ ಕೊಡಗು ಅಧಿಕಾರ ಸ್ವೀಕರಿಸಿದರು. ಜೆಸಿ ವಲಯ 15ರ ಉಪಾಧ್ಯಕ್ಷೆ ಡಾ.ಹರಿಣಾಕ್ಷಿ ಕರ್ಕೇರ ನೂತನ ಅಧ್ಯಕ್ಷೆಗೆ ಪ್ರಮಾಣವಚನ ಬೋಧಿಸಿದರು.
ಕಾರ್ಯದರ್ಶಿಯಾಗಿ ಸಮಿಯಾ ಹೆಗ್ಡೆ, ಖಚಾಂಜಿಯಾಗಿ ಮಹಮ್ಮದ್​ ಜಿಯಾದ್​, ಮಹಿಳಾ ಜೆಸಿ ಸಂಚಾಲಕರಾಗಿ ನಯನಾ ಉದಯ್​ ನಾಯ್ಕ್​, ಯುವ ಜೆಸಿ ಅಧ್ಯಕ್ಷರಾಗಿ ಶ್ರೀರಾಜ್​ ಆಚಾರ್ಯ ಅಧಿಕಾರ ವಹಿಸಿಕೊಂಡರು. ಜೆಸಿ ಸದಸ್ಯರಿಗೆ ವಲಯಾಧ್ಯಕ್ಷ ಸಂತೋಷ್​ ಶೆಟ್ಟಿ ಪ್ರಮಾಣವಚನ ಬೋಧಿಸಿದರು.
ಜೆಸಿಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷ ಮಹಮ್ಮದ್​ ಸುಹಾನ್​ ಹಾಗೂ ಲಯನ್ಸ್​ ಸಂಸ್ಥೆಯ ಪೂರ್ವ ಜಿಲ್ಲಾ ಗವರ್ನರ್​, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಜಯಕರ್​ ಶೆಟ್ಟಿ ಇಂದ್ರಾಳಿ ಶುಭ ಹಾರೈಸಿದರು. ವಿನಯ ಆಚಾರ್ಯ ಜೆಸಿ ವಾಣಿ ಹೇಳಿದರು. ನೂತನ ಕಾರ್ಯದರ್ಶಿ ಸಮಿಯಾ ಹೆಗ್ಡೆ ವಂದಿಸಿದರು.

'ಉಡುಪಿ ಕಣ್ಮಣಿ' ಪ್ರಶಸ್ತಿ ಪ್ರದಾನ

ಉಡುಪಿ ಸಿಟಿ ಘಟಕದ ಪೂವಾಧ್ಯಕ್ಷ ದಿ.ಶಶಿಪ್ರಸಾದ್​ ರಾವ್​ ಸ್ಮರಣಾರ್ಥ ನೀಡುವ ಉಡುಪಿ ಕಣ್ಮಣಿ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಸಾಧಕಿ, ಖ್ಯಾತ ಯುವ ಯೋಗ ಪಟು ತನುಶ್ರೀ ಪಿತ್ರೋಡಿ ಅವರಿಗೆ ನೀಡಲಾಯಿತು. ನೂತನ ಅಧ್ಯಕ್ಷರ ಆಶಯದಂತೆ ದಿ.ಸಾಲು ಮರದ ತಿಮ್ಮಕ್ಕ ಸ್ಮರಣಾರ್ಥ ವರ್ಷಪೂರ್ತಿ ನಡೆಯುವ ಹಸಿರು ಜಾಗೃತಿ ಕಾರ್ಯಕ್ರಮವನ್ನೂ ಉದ್ಘಾಟಿಸಲಾಯಿತು.