ಉಡುಪಿಯ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ನೇಜಿ ನೆಡುವ 'ನಟ್ಟಿ' ಕಾರ್ಯಕ್ರಮವನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಕೆ.ಉದಯಕುಮಾರ್ ಶೆಟ್ಟಿ, ನೀತಾ ಪ್ರಭು, ದಿನೇಶ್ ಅಮೀನ್, ಪ್ರಭಾಕರ್ ಪೂಜಾರಿ, ಸಂಧ್ಯಾ ರಮೇಶ್ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕರೆ
* ಅಂಬಲಪಾಡಿ ಗದ್ದೆಯಲ್ಲಿ 'ನಟ್ಟಿ' ಕಾರ್ಯಕ್ರಮ
ಉಡುಪಿ: ಗ್ರಾಮೀಣ ಪ್ರದೇಶಗಳ ಆಚಾರ-ವಿಚಾರಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡಾಗ ಸಮಾಜ ಉತ್ತಮವಾಗಿಯೇ ಮುಂದುವರಿಯಲು ಸಾಧ್ಯ. ಗದ್ದೆಯಲ್ಲಿ ಸಾಮೂಹಿಕ ನೇಜಿ ನೆಡುವ 'ನಟ್ಟಿ' ಕಾರ್ಯಕ್ರಮದೊಂದಿಗೆ ಹಿರಿಯ ಕೃಷಿಕರನ್ನು ಗೌರವಿಸಿರುವುದೂ ಸಹ ನಮ್ಮ ಸಂಸತಿಯ ಭಾಗವೇ ಆಗಿದೆ. ಕೃಷಿ ಕಾಯಕ ಇನ್ನಷ್ಟು ವೃದ್ಧಿಯಾಲು ಎಲ್ಲರೂ ಕೈಜೋಡಿಸೋಣ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿಯ ಅಂಬಲಪಾಡಿ ಬಂಕೇರ್ಕಟ್ಟ ಗದ್ದೆಯಲ್ಲಿ ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ನೇತೃತ್ವದಲ್ಲಿ ಹಾಗೂ ಸ್ಥಳೀಯ ಕಾರ್ಯಕರ್ತರ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ನೇಜಿ ನೆಡುವ 'ನಟ್ಟಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪ್ರಗತಿಪರ ಕೃಷಿಕರಾದ ಸರೋಜಿನಿ ಪೂಜಾರ್ತಿ, ಜಾನಕಿ ಪೂಜಾರ್ತಿ, ಭವಾನಿ ಪೂಜಾರ್ತಿ, ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಸವಿತಾ ಸಂತೋಷ್ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ವಾಣಿ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.
ಎಸ್ಐಆರ್ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಪಂದುಬೆಟ್ಟು, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ, ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಅಮೀನ್ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರ್ವಹಿಸಿದರು.
ಕೃಷಿ, ಶುಭ್ರ ಪರಿಸರ ಇಲ್ಲದೆ ನಮ್ಮೆಲ್ಲರ ಬದುಕು ಊಹಿಸಿಕೊಳ್ಳಲೂ ಅಸಾಧ್ಯ. 'ಏಕ್ ಪೇಡ್ ಮಾ ಕೆ ನಾಮ್' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಎಲ್ಲರೂ ತಾಯಿಯ ಹೆಸರಲ್ಲಿ ಒಂದೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೂ ಕಾಳಜಿ&ಕೊಡುಗೆ ನೀಡುವಂತಾಗಬೇಕು.
— ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.