ರಸ್ತೆಯಲ್ಲಿ ಗುಳಿ ಬಿದ್ದಿರುವುದು. 
ಉಡುಪಿ

ಅವೈಜ್ಞಾನಿಕ ಕಾಮಗಾರಿ ವಿರುದ್ಧ ಆಕ್ರೋಶ

ಇಂದಿರಾ ಎನ್ ಕೆ
ಹೆಬ್ರಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವತಿಯಿಂದ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯಿಂದ ಅಲ್ಲಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸವಾರರಿಗೆ ಸಮಸ್ಯೆಯಾಗಿರುವುದರಿಂದ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಶುಕ್ರವಾರ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಕೆಲವು ಕಡೆ ಕಾಮಗಾರಿ ನಡೆಯುತ್ತಿವೆ. ಅವೈಜ್ಞಾನಿಕವಾಗಿ ಅಗೆದ ರಸ್ತೆಯನ್ನು ಮುಚ್ಚಿರುವುದರಿಂದ ರಸ್ತೆಗಳು ಗುಳಿ ಬಿದ್ದು ಸಣ್ಣ ವಾಹನಗಳಿಗೆ ಸಮಸ್ಯೆ ಉಂಟಾಗಿದೆ. ಹೆಬ್ರಿ ಪೊಲೀಸ್ ಠಾಣೆಗೆ ಹೋಗುವ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿ ನಿರ್ಮಾಣವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಶ್ರೀ ಕ್ರಮ ಜರುಗಿಸುವಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.
ಯಾವುದೇ ಅವಡ ಸಂಭವಿಸಿದ್ದಲ್ಲಿ, ಇದರ ಸಂಪೂರ್ಣ ಜವಾಬ್ದಾರಿ ನೀವೇ ಹೊರಬೇಕು. ಅಪಘಾತ ಉಂಟಾದರೆ ರಸ್ತೆ ತಡೆ ಮಾಡಿ ಪ್ರತಿಭಟನೆ ವಾಡುತ್ತೇವೆ ಎಂದು ಸಾವಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ನೀರು, ನೈರ್ಮಲ್ಯ ಇಲಾಖೆ ಅಧಿಕಾರಿ ಬೊಮ್ಮೇಗೌಡ, ಇಂಜಿನಿಯರ್ ಪ್ರವೀಣ್, ಸಾರ್ವಜನಿಕರಾದ ದಿವಾಕರ್ ಪೂಜಾರಿ, ಹರಿಪ್ರಸಾದ್ ಶೆಟ್ಟಿ ಮೊದಲಾದವರಿದ್ದರು.