ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಕಾಲೇಜಿನ ವಿದ್ಯಾರ್ಥಿ ಪರಿಷತ್‌ನ ಪದಗ್ರಹಣ ಹಾಗೂ ಕೌಶಲಾಧಾರಿತ ಪ್ರಮಾಣಪತ್ರ ಕೋರ್ಸ್‌ಗಳ ಉದ್ಘಾಟನೆ ನೆರವೇರಿತು. ಕಟೀಲು ದೇಗುಲ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕೊಡೆತ್ತೂರುಗುತ್ತು ಕಿಶೋರ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು. 
ಉಡುಪಿ

ನಮ್ಮದು ಸ್ತ್ರೀಗೆ ದೇವತೆಯ ಸ್ಥಾನ ನೀಡಿದ ಸಂಸ್ಕೃತಿ

ವಿಜಯವಾಣಿ ಸುದ್ದಿಜಾಲ ಕಟೀಲು
ದೈಹಿಕವಾಗಿ ಮಹಿಳೆ ಪುರುಷರಿಗಿಂತ ಅಬಲೆಯಾಗಿರಬಹುದು. ಹಾಗಾಗಿ ಬಾಲ್ಯದಲ್ಲಿ ತಂದೆಯಿಂದ, ಯೌವನದಲ್ಲಿ ಗಂಡನಿಂದ, ವೃದ್ಧಾಪ್ಯದಲ್ಲಿ ಮಕ್ಕಳಿಂದ ರಕ್ಷಿಸಬೇಕಾದವಳು ಸ್ತ್ರೀ. ಇಡೀ ಕುಟುಂಬವನ್ನು ನಿರ್ವಹಿಸುವ, ಗೌರವವನ್ನು ಹೆಚ್ಚಿಸುವ ಆಕೆಗೆ ದೇವತೆಯ ಸ್ಥಾನ ನೀಡಿದ ಸಂಸ್ಕೃತಿ ನಮ್ಮದು ಎಂದು ಕಟೀಲು ದೇಗುಲ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಕಾಲೇಜಿನ ವಿದ್ಯಾರ್ಥಿಪರಿಷತ್‌ನ ಪದಗ್ರಹಣ ಹಾಗೂ ಕೌಶಲಾಧಾರಿತ ಪ್ರಮಾಣಪತ್ರ ಕೋರ್ಸ್‌ಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಕೊಡೆತ್ತೂರುಗುತ್ತು ಕಿಶೋರ್ ಕುಮಾರ್ ಶೆಟ್ಟಿ ನೂತನ ಕೋರ್ಸ್‌ಗಳನ್ನು ಉದ್ಘಾಟಿಸಿದರು. ವಿದ್ಯಾರ್ಥಿ ಪರಿಷತ್‌ಗೆ ಮೇಘನಾ, ಪ್ರೀತಿ, ಶ್ರಾವ್ಯ ಮಲ್ಯ ಹಾಗೂ ಶಮಿತಾ ಅವರನ್ನು ಕ್ರಮವಾಗಿ ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡಲಾಯಿತು. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ, ಬಿಪಿನ್‌ಚಂದ್ರ ಶೆಟ್ಟಿ ಕೊಡೇತೂರುಗುತ್ತು, ದಯಾನಂದ ಮಾಡ, ಮಿಥುನ ಕೊಡೆತ್ತೂರು, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪಾಲಕ ಶಿಕ್ಷಕ ಸಂಘ ಉಪಾಧ್ಯಕ್ಷೆ ಭಾರತಿ ಭಟ್, ಕೌಶಲಾಧಾರಿತ ಪ್ರಮಾಣಪತ್ರ ಕೋರ್ಸ್‌ಗಳ ಸಂಪನ್ಮೂಲ ವ್ಯಕ್ತಿಗಳಾದ ಸಿಎ ಅಶೋಕ್ ರಾವ್, ಸಿಎ ಚರಣರಾಜ್ ಹಾಗೂ ರವಿರಾಜ್ ಪೂಜಾರಿ, ಸಿಬ್ಬಂದಿ ಕಾರ್ಯದರ್ಶಿ ಡಾ.ಪದ್ಮನಾಭ ಮರಾಠೆ ಹಾಗೂ ಕಂಪ್ಯೂಟರ್ ತರಬೇತುದಾರರಾದ ಹರ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ವಿಜಯ್ ವಿ.ವಿದ್ಯಾರ್ಥಿಗಳ ಉದ್ಯೋಗಾವಕಾಶ ಹಾಗೂ ಕೌಶಲಾಭಿವೃದ್ಧಿಗೆ ಪೂರಕವಾಗಿ ಪರಿಚಯಿಸಲಾದ ವಿವಿಧ ಕೋರ್ಸ್‌ಗಳ ವಿವರಗಳನ್ನು ನೀಡಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಅಶ್ವಿತಾ ವಿ.ಶೆಟ್ಟಿ ಪ್ರಮಾಣ ವಚನ ಬೋಧಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕಿ ಪೂಜಾ ಯು.ಕಾಂಚನ್ ವಂದಿಸಿದರು. ಪೃಥ್ವಿ ಎಚ್.ಪೂಜಾರಿ, ಆಕಾಶ್ ಮನೋಜ್ ಪೂಜಾರಿ ನಿರೂಪಿಸಿದರು.