ಬಿರುವೆರ್ ಕುಡ್ಲ ಸಂಘಟನೆಯ ನೇತೃತ್ವದಲ್ಲಿ ದುಬೈ ಘಟಕದ ಆಶ್ರಯದಲ್ಲಿ 2 ಅಸಹಾಯಕ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು. ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಸಾಯಿರಾಮ್, ಪದ್ಮರಾಜ್ ಆರ್.ಪೂಜಾರಿ ಇದ್ದರು.  
ಉಡುಪಿ

ಸಂಘಟನೆಗಳು ಸಮಾಜದ ಬೆನ್ನೆಲುಬು

ಗುರುಪುರ: ಬಿರುವೆರ್ ಕುಡ್ಲ ಸಂಘಟನೆ ಕೆಲವು ವರ್ಷಗಳಿಂದ ಜಾತಿ-ಧರ್ಮ ಭೇದ ಮೀರಿ ಸೇವೆ ಮಾಡುತ್ತಿದೆ. ದೂರದ ದುಬೈಯಲ್ಲಿ ದುಡಿಯುವ ಕನ್ನಡಿಗರು ಕೂಡ ತಮ್ಮ ಊರಿನ ಜನರಿಗಾಗಿ ಈ ರೀತಿ ಕೈಜೋಡಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಂತಹ ಸಂಘಟನೆಗಳೇ ಸಮಾಜದ ಬೆನ್ನೆಲುಬು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಬಿರುವೆರ್ ಕುಡ್ಲ ಸಂಘಟನೆಯ ನೇತೃತ್ವದಲ್ಲಿ ದುಬೈ ಘಟಕದ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳ ಸಭಾಂಗಣದಲ್ಲಿ ಆಯೋಜಿಸಲಾದ 2 ಅಸಹಾಯಕ ಕುಟುಂಬಗಳಿಗೆ ಮಾನವೀಯ ಸೇವೆಯ ರೂಪವಾಗಿ ಒಟ್ಟು 1,65,000 ರೂ. ಆರ್ಥಿಕ ನೆರವು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ 55,000 ರೂ.ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ದುರ್ಗಾಪ್ರಸಾದ್ ಅವರ ಚಿಕಿತ್ಸೆಗೆ 1,10,000 ರೂ ನೆರವು ನೀಡಲಾಗಿದೆ.

ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಘಟನೆಯ ಉದಯ ಕುಮಾರ್ ಮತ್ತು ಇತರರು ಮಾಡುತ್ತಿರುವ ಉತ್ತಮ ಸೇವಾಕಾರ್ಯ ಹೀಗೆ ನಿರಂತರವಾಗಿ ಮುಂದುವರಿಯಲಿ. ಯುವಕರು ನಡೆಸುತ್ತಿರುವ ಸಮಾಜಮುಖಿ ಕೆಲಸಕ್ಕೆ ನನ್ನ ಬೆಂಬಲವಿದೆ ಎಂದರು.
ಕುದ್ರೋಳಿ ಶ್ರೀ ಗೋಕರ್ಣಾನಾಥೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಸುಭಾಷ್ ಬೋಳೂರು, ವಸಂತ್ ಪೂಜಾರಿ, ಉದ್ಯಮಿ ದರ್ಶನ್ ಜೈನ್, ರಣದೀಪ್ ಕಾಂಚನ್, ಬಿರುವೆರ್ ಕುಡ್ಲ ಸಂಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ, ಅಧ್ಯಕ್ಷ ರಾಕೇಶ್ ಬಲ್ಲಾಲ್‌ಬಾಗ್, ದುಬೈ ಘಟಕದ ಅಧ್ಯಕ್ಷ ಸಂದೀಪ್ ಕೋಟ್ಯಾನ್ ಕಾರ್ಕಳ, ಅಶ್ವಿನ್ ರಾಜ್ ಚಿಲಿಂಬಿ, ಲೋಹಿತ್ ಗಟ್ಟಿ, ರಾಮ ಎಕ್ಕೂರು, ದಿನಿಲ್ ಬಲ್ಲಾಲ್‌ಬಾಗ್, ಗಿರೀಶ್ ಬೋಳೂರು, ಗಣೇಶ್ ಎಕ್ಕೂರು, ದುಬೈ ಘಟಕದ ರಿತೇಶ್ ಉಲ್ಲಾಲ, ಸಂಘಟನೆಯ ಜಿಲ್ಲಾ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ದಾನಿಗಳು ಹಾಗೂ ಫಲಾನುಭವಿ ಕುಟುಂಬಿಕರು ಇದ್ದರು.