ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ ತುಳುವರ ಕಾಮಧೇನು ಬಿರುದು ನೀಡಿ ಡಾ.ಎಂ.ಮೋಹನ್ ಆಳ್ವ ಅವರನ್ನು ಸನ್ಮಾನಿಸಲಾಯಿತು. ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ.ಭಂಡಾರಿ, ಪ್ರಧಾನ ಕಾರ್ಯದರ್ಶಿ ಪಿ.ಎ.ಪೂಜಾರಿ, ಕೋಶಾಧಿಕಾರಿ ವಿಜಯಲಕ್ಷ್ಮೀ ಬಿ.ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪ್ರಪಂಚದಾದ್ಯಂತ ಇರುವ ತುಳುವರಿಗೆ ವೈದ್ಯಕೀಯ ಶಿಕ್ಷಣ, ಅದರಲ್ಲೂ ಎಂಬಿಬಿಎಸ್ ಕಲಿಯಲು ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಕಾಲೇಜನ್ನು ಭಾಷಾ ಅಲ್ಪಸಂಖ್ಯಾತ ಕೋಟಾದಡಿ ನೋಂದಾಯಿಸಲಾಗಿದೆ. ಇದು ಲಾಭ-ನಷ್ಟದ ಪ್ರಶ್ನೆಯಲ್ಲ, ತುಳುವನಾಗಿ ತನ್ನ ಕರ್ತವ್ಯ ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದರು.
ತುಳು, ಕನ್ನಡ ಭಾಷೆ, ಸಂಸ್ಕೃತಿಗೆ ಕೊಡುಗೆ ನೀಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಆರಂಭಿಸಿರುವ ವೈದ್ಯಕೀಯ ಕಾಲೇಜಿನ 150 ಸೀಟುಗಳ ಪೈಕಿ 52 ಸೀಟುಗಳನ್ನು ತುಳು ಮಾತೃಭಾಷಿಕರಿಗೆ ಮೀಸಲಿರಿಸಿರುವುದನ್ನು ಶ್ಲಾಘಿಸಿ, ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ ಅವರಿಗೆ ‘ತುಳುವರ ಕಾಮಧೇನು’ ಬಿರುದು ನೀಡಿ ಸನ್ಮಾನಿಸಲಾಯಿತು.
ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ.ಭಂಡಾರಿ, ಪ್ರಧಾನ ಕಾರ್ಯದರ್ಶಿ ಪಿ.ಎ.ಪೂಜಾರಿ, ಕೋಶಾಧಿಕಾರಿ ವಿಜಯಲಕ್ಷ್ಮೀ ಬಿ.ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ಮೂಡುಬಿದಿರೆ ತುಳುಕೂಟ ಅಧ್ಯಕ್ಷೆ ಜಯಂತಿ ಎಸ್.ಬಂಗೇರ, ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಕಾರ್ಯದರ್ಶಿ ಚೇತನಾ ರಾಜೇಂದ್ರ ಹೆಗ್ಡೆ, ಉಪಾಧ್ಯಕ್ಷೆ ಶ್ವೇತಾ ಜೈನ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ವೇಣುಗೋಪಾಲ್ ಶೆಟ್ಟಿ, ಸದಾನಂದ ನಾರಾವಿ, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ, ಉಡುಪಿ ತುಳುಕೂಟ ಅಧ್ಯಕ್ಷ ಗಂಗಾಧರ ಕಿದಿಯೂರು, ಭುವನ ಪ್ರಸಾದ್, ಯಕ್ಷಧ್ರುವ ಪಟ್ಲ ಫೌಂಡೇಶನ್ ತಾರಾನಾಥ ಶೆಟ್ಟಿ ಬೋಳಾರ, ತುಳುನಾಡ ರಕ್ಷಣಾ ವೇದಿಕೆ ಯೋಗೀಶ್ ಶೆಟ್ಟಿ ಜೆಪ್ಪು ಉಪಸ್ಥಿತರಿದ್ದರು.