ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ಸುಬ್ರಹ್ಮಣ್ಯ: ದ.ಕ.ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಇತ್ಯಾದಿ ಸೇವೆಗಳನ್ನು ದೇವಳದಲ್ಲಿ ನೆರವೇರಿಸಿದರೆ ಮಾತ್ರ ಪೂರ್ಣಫಲ ಸಿಗುತ್ತದೆ. ಆದರೆ ಮಧ್ಯವರ್ತಿಗಳ ಮೂಲಕ ಖಾಸಗಿ ವಸತಿಗೃಹಗಳಲ್ಲಿ, ಮಠ, ಮಂದಿರಗಳಲ್ಲಿ, ಪುರೋಹಿತರ ಮನೆಗಳಲ್ಲಿ ಅಥವಾ ಇತರ ಯಾವುದೇ ಖಾಸಗಿ ಸ್ಥಳಗಳಲ್ಲಿ ನೆರವೇರಿಸಿದರೆ ದೋಷ ಪರಿಹಾರವಾಗುವುದಿಲ್ಲ ಮತ್ತು ಅದರ ಫಲವೂ ದೊರಕುವುದಿಲ್ಲ ಎಂದು ದೇವಳದ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಮಧ್ಯವರ್ತಿಗಳು ಇಲ್ಲ
ದೇವಳದಲ್ಲಿ ಭಕ್ತರು ನಡೆಸುವ ಸರ್ಪಸಂಸ್ಕಾರ ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾದ ಗೊಂದಲ ನಿವಾರಣೆಗೆ ದೇವಳದ ಆಡಳಿತ ಸ್ಪಷ್ಟನೆ ನೀಡಿದೆ. ನಾಗದೋಷ ಸಂಬಂಧಿಸಿದ ಸೇವೆಗಳನ್ನು ನೆರವೇರಿಸಲು ಯಾವುದೇ ಮಧ್ಯವರ್ತಿಗಳನ್ನು ದೇವಸ್ಥಾನದ ವತಿಯಿಂದ ನೇಮಕ ಮಾಡಿಲ್ಲವೆಂದು ತಿಳಿಸಿದೆ.
ಆನ್‌ಲೈನ್‌ನಲ್ಲಿ ಕಾಯ್ದಿರಿಸುವಿಕೆ
ಹಲವಾರು ವರ್ಷಗಳಿಂದ ಭಕ್ತರು ಸರ್ಪಸಂಸ್ಕಾರ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಭಕ್ತರಿಗೆ ಅನುಕೂಲವಾಗುವಂತೆ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಸೇವೆಯನ್ನು ಮುಂಚಿತವಾಗಿ ಕಾದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ