ಉಡುಪಿ: ಫ್ರೆಂಡ್ಶಿಪ್ ಕ್ಲಬ್ ಸದಸ್ಯತ್ವ ಪಡೆಯುವ ಆಸೆಗೆ ಬಿದ್ದ ವೃದ್ಧರೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 5,11,882 ರೂ. ಕಳೆದುಕೊಂಡಿರುವ ಘಟನೆ ಕಡಿಯಾಳಿಯಲ್ಲಿ ನಡೆದಿದೆ.
ಕಡಿಯಾಳಿ ನಿವಾಸಿ ಉಸ್ಮಾನ್ ಸಾಹೇಬ್ (66) ವಂಚನೆಗೊಳಗಾದವರು. ಇವರು ತಮ್ಮ ಎಸ್ಬಿ ಖಾತೆಯಿಂದ ಜೂನ್ 27 ರಿಂದ ಜುಲೈ 14ರ ಅವಧಿಯಲ್ಲಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿದ್ದರು. ಜೂನ್ 27 ರಂದು 29,000 ರೂ., ಜುಲೈ 9 ರಂದು ಒಂದೇ ದಿನ ಮೂರು ಬಾರಿ 84,882 ರೂ., 99,000 ರೂ. ಹಾಗೂ 99,000 ರೂ. ಮತ್ತು ಜುಲೈ 14 ರಂದು 2,00,000 ರೂ. ಹಣವನ್ನು ಗೂಗಲ್ ಪೇ, ಕ್ಯೂಆರ್ ಕೋಡ್ ಸ್ಕಾ$ನರ್ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಸೈಬರ್ ವಂಚಕರು ಸೂಚಿಸಿದ ಖಾತೆಗಳಿಗೆ ಕಳುಹಿಸಿದ್ದರು.
ನಂತರ ಆನ್ಲೈನ್ ವಂಚನೆಗೆ ಒಳಗಾಗಿರುವುದನ್ನು ಅರಿತ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.