ಉಡುಪಿಯಲ್ಲಿ ಆಯೋಜಿಸಿದ್ದ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮವನ್ನು ಅನುರಾಧಾ ಹಾದಿಮನಿ ಉದ್ಘಾಟಿಸಿದರು. ಡಾ.ಅಶೋಕ್​ ವೈ.ಜಿ., ರತ್ನಾ ಸುವರ್ಣ, ಡಾ. ಗಣನಾಥ್​ ಶೆಟ್ಟಿ ಎಕ್ಕಾರು, ಸೋಜನ್​ ಕೆ.ಜಿ., ಜಯಶ್ರೀ ಇದ್ದರು. 
ಉಡುಪಿ

ವೃತ್ತಿ ಪರಿಣತಿ ಹೆಚ್ಚಳಕ್ಕೆ ತರಬೇತಿ ಅಗತ್ಯ

* ಅನುರಾಧಾ ಹಾದಿಮನಿ ಅಭಿಪ್ರಾಯ

* ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಕಾರ್ಯಾಗಾರ

ಉಡುಪಿ: ಯಾವುದೇ ಸಂಸ್ಥೆಯಲ್ಲಾದರೂ ತರಬೇತಿಯು ಬಹುಮುಖ್ಯ ಅಂಶವಾಗಿರುತ್ತದೆ. ಅದು ವೃತ್ತಿ ಬದುಕಿನಲ್ಲಿ ಪರಿಣತಿ ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ವಿಕಲಚೇತನರಿಗೆ ಸಂಬಂಧಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ತರಬೇತಿ ಅತಿ ಅಗತ್ಯ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅನುರಾಧಾ ಬಿ. ಹಾದಿಮನಿ ಅಭಿಪ್ರಾಯಪಟ್ಟರು.
ಉಡುಪಿಯ ಅಂಬಲಪಾಡಿಯಲ್ಲಿ ಡಾ. ಜಿ.ಶಂಕರ್​ ಎವಿ ಹಾಲ್​ನಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಸಹಕಾರದಲ್ಲಿ ಆಯೋಜಿಸಿದ್ದ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕು ಮಟ್ಟದ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ರೆಡ್​ ಕ್ರಾಸ್​ ಸಭಾಪತಿ ಡಾ.ಅಶೋಕ್​ ವೈ.ಜಿ. ಮಾತನಾಡಿದರು. ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನಾ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. 
ವಿಕಲಚೇತನರ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ಯೋಜನಾ ಸಹಾಯಕ ಶಿವಾಜಿ, ಫಿಸಿಯೋಥೆರಪಿಸ್ಟ್​ ಡಾ. ಶ್ರೇಯಾ, ಮನಶಾಸ್ತ್ರಜ್ಞ ವೈಶಾಖ್​ ವಾರಂಬಳ್ಳಿ, ವಾಕ್​ ಮತ್ತು ಶ್ರವಣತಜ್ಞೆ ನೆಲಿಶಾ ಮೆರಿಲ್​ ನಾಯ್ಕ್​, ನಿವೃತ್ತ ಅಧಿಕಾರಿ ನಿರಂಜನ್​ ಭಟ್​, ಎ.ವಿ. ಬಾಳಿಗಾ ಆಸ್ಪತ್ರೆ ದೊಡ್ಡಣಗುಡ್ಡೆಯ ವೈದ್ಯಾಧಿಕಾರಿ ಡಾ. ಕಾವ್ಯಾ ಟಿ., ಡಾ. ಜಿ. ಶಂಕರ್​ ಮಹಿಳಾ ಸರ್ಕಾರಿ ಪದವಿ ಕಾಲೇಜ್​ನ ಪ್ರಾಂಶುಪಾಲ ಸೋಜನ್​ ಕೆ.ಜಿ. ಇತರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್​ ಅಧಿಕಾರಿ ಜಯಶ್ರೀ ಸ್ವಾಗತಿಸಿದರು. ಜಿಲ್ಲಾ ರೆಡ್​ ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ್​ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.