ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಅರಿವಿನ ಬೆಳಕು' ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ.ಸುಬ್ಬಪ್ಪ ಕೈಕಂಬ ಉದ್ಘಾಟಿಸಿದರು. ಡಾ. ವರದರಾಜ್​ ಚಂದ್ರಗಿರಿ, ಡಾ.ಗಣನಾಥ್​ ಶೆಟ್ಟಿ ಎಕ್ಕಾರು, ಪೂರ್ಣಿಮಾ, ಪುಪ್ಪರಾಜ್​ ಇದ್ದರು. 
ಉಡುಪಿ

ಜ್ಞಾನದ ದಿಗಂತ ವಿಸ್ತರಿಸಿದ ಕಾರಂತರು

* ಚಿಂತಕ ಡಾ. ವರದರಾಜ್​ ಚಂದ್ರಗಿರಿ ಅಭಿಪ್ರಾಯ

* ಪುತ್ತೂರಿನಲ್ಲಿ 'ಅರಿವಿನ ಬೆಳಕು' ಉಪನ್ಯಾಸ ಮಾಲಿಕೆ

ಉಡುಪಿ: ಪ್ರಯೋಗಶೀಲ ಸಾಹಿತ್ಯ ಮತ್ತು ಸಾಮಾಜಿಕ ವಲಯದಲ್ಲಿ ಕಾರ್ಯನಿರ್ವಹಿಸಿದ್ದ ಕೋಟ ಶಿವರಾಮ  ಕಾರಂತ ಅವರು ಯಕ್ಷಗಾನಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟವರು. ಪ್ರತಿಯೊಂದು ಕ್ಷೇತ್ರಕ್ಕೂ ಸಹ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಅವರು ಜ್ಞಾನದ ದಿಗಂತ ವಿಸ್ತರಿಸಿದವರು ಎಂದು ಚಿಂತಕ ಡಾ. ವರದರಾಜ್​ ಚಂದ್ರಗಿರಿ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್​ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಅರಿವಿನ ಬೆಳಕು' ಉಪನ್ಯಾಸ ಮಾಲಿಕೆ-15 ಕಾರ್ಯಕ್ರಮದಲ್ಲಿ 'ಕಾರಂತರ ಕಾದಂಬರಿಗಳಲ್ಲಿ ವೈಚಾರಿಕ ಚಿಂತನೆ' ವಿಷಯ ಕುರಿತು ಉಪನ್ಯಾಸ ನೀಡಿದರು.

ವೈಚಾರಿಕ ಚಿಂತನೆ

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜ್​ನ ಪ್ರಾಂಶುಪಾಲ ಪ್ರೊ.ಸುಬ್ಬಪ್ಪ ಕೈಕಂಬ ಮಾತನಾಡಿ, ಕಾರಂತರ ಕಾದಂಬರಿ ಮಾತ್ರವಲ್ಲದೆ ಅವರ ಪ್ರತಿಯೊಂದು ಸಾಹಿತ್ಯ ಪ್ರಕಾರವೂ ವೈಚಾರಿಕ ಚಿಂತನೆ ಹೊಂದಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಕೊಡುಗೆ ಅಪಾರವಾಗಿದೆ ಎಂದರು.
ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ.ಗಣನಾಥ್​ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಜೀವನ್​ ಕಾರ್ಯಕ್ರಮ ನಿರೂಪಿಸಿದರು. ಕಾಲೇಜ್​ನ ಐಕ್ಯುಎಸಿ ಸಂಚಾಲಕ ಪುಪ್ಪರಾಜ್​ ವಂದಿಸಿದರು.
"

ಜ್ಞಾನವೆಂಬುದು ಬಹುಮುಖಿ. ಎಲ್ಲ ವಿಚಾರಗಳ ಕುರಿತು ಅರಿತಾಗ ಚಿಂತನಾ ಕ್ರಮದಲ್ಲಿ ಬದಲಾವಣೆ ಆಗುತ್ತದೆ. ವಿದ್ಯಾರ್ಥಿಗಳೂ ಸಹ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕಾರಂತರ ಪುಸ್ತಕಗಳನ್ನು ಓದಬೇಕು.

— ಡಾ.ಗಣನಾಥ್​ ಶೆಟ್ಟಿ ಎಕ್ಕಾರು. ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ.