Crime 
ಉಡುಪಿ

ಅರಣ್ಯ ವೀಕ್ಷಕರ ಕರ್ತವ್ಯಕ್ಕೆ ಅಡ್ಡಿ

ಹೆಬ್ರಿ: ಅರಣ್ಯದಲ್ಲಿ ಹಾಲುಮಡ್ಡಿ ಸಂಗ್ರಹ ವಾಡುತ್ತಿದ್ದ ಬೇಳಂಜೆ ಗ್ರಾಮದ ನಿವಾಸಿಗಳಾದ ಶಿವರಾಮ ನಾಯ್ಕ ಮತ್ತು ಪುತ್ರ ಅರುಣ್ ವಿರುದ್ಧ ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅರಣ್ಯ ವೀಕ್ಷಕರಾದ ಕನಕಪ್ಪ ಮತ್ತು ರಾಮಚಂದ್ರ ಅವರು ಸೋಮೇಶ್ವರ ವನ್ಯಜೀವಿ ವಲಯದ ಕುಚ್ಚೂರು ಗ್ರಾಮದ ಹಣೆಗೋಡು ಎಂಬಲ್ಲಿ ಗಸ್ತು ತಿರುಗುವಾಗ ಆ.13ರಂದು ಬೆಳಗ್ಗೆ 11ಕ್ಕೆ ಬೇಳಂಜೆ ಗ್ರಾಮದ ನಿವಾಸಿಗಳಾದ ಶಿವರಾಮ ನಾಯ್ಕ ಮತ್ತು ಪುತ್ರ ಅರುಣ್ ಅರಣ್ಯ ವೀಕ್ಷಕರನ್ನು ನೋಡಿ ಓಡಲು ಯತ್ನಿಸಿದ್ದಾರೆ.
ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಶಿವರಾಮ ನಾಯ್ಕ ಸಟ್ಟುಗವನ್ನು ಹಾಗೂ ಅರುಣ್ ಕತ್ತಿ ತೋರಿಸಿ ಹತ್ತಿರ ಬಂದರೆ ಕಡಿಯುವುದಾಗಿ ಬೆದರಿಸಿ ಅರಣ್ಯ ವೀಕ್ಷಕರ ಕಡೆ ಕಲ್ಲು ಎಸೆದು 1 ಕೆ.ಜಿ.ಯಷ್ಟು ಮೇಣದೊಂದಿಗೆ ಪರಾರಿಯಾಗಿದ್ದಾರೆ. ಕತ್ತಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅರಣ್ಯ ವೀಕ್ಷಕ ಕನಕಪ್ಪ ದೂರು ನೀಡಿದ್ದಾರೆ.