ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಲಕ್ಷ್ಮೀ ಕೊಳ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಕುತ್ಯಾರು ನವೀನ್​ ಶೆಟ್ಟಿ, ಯಶ್​ಪಾಲ್​ ಸುವರ್ಣ, ಕಿರಣಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ, ಮಟ್ಟಾರ್​ ರತ್ನಾಕರ್​ ಹೆಗ್ಡೆ, ದಿನಕರ್​ ಶೆಟ್ಟಿ ಹೆರ್ಗ, ಗಿರೀಶ್​ ಅಂಚನ್​, ವಿಜಯ ಕೊಡವೂರು, ಸಂಧ್ಯಾ ರಮೇಶ್​ ಇತರರಿದ್ದರು. 
ಉಡುಪಿ

ಸಂಘಟನೆಯ ಶಕ್ತಿಯಾಗಿದ್ದ ಲಕ್ಷ್ಮೀ ಕೊಳ

* ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಭಿಪ್ರಾಯ

* ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನುಡಿನಮನ

ಉಡುಪಿ: ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಜಿಲ್ಲಾಯಾದ್ಯಂತ ಸಂಘಟನೆ ಬಲಪಡಿಸಿದ ಶ್ರಮಜೀವಿ ಲಕ್ಷ್ಮೀ ಎಂ. ಕೊಳ ಅವರ ಹಠಾತ್​ ಅಗಲುವಿಕೆ ತೀವ್ರ ಆಘಾತ ತಂದಿದೆ. ನಗರಸಭೆಯ ಉಪಾಧ್ಯಕ್ಷೆಯೂ ಆಗಿದ್ದ ಅವರ ಸಮಾಜ ಸೇವೆ, ಕರ್ತವ್ಯ ನಿಷ್ಠೆ ಮಾದರಿಯಾಗಿದ್ದು, ನಮ್ಮ ಸಂಘಟನೆಯ ಶಕ್ತಿ ಆಗಿದ್ದರು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಉಡುಪಿ ನಗರ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ (ಆ.7) ಸಂಜೆ ಆಯೋಜಿಸಿದ್ದ ಲಕ್ಷ್ಮೀ ಮಂಜುನಾಥ್​ ಕೊಳ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು.
ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್​ ರತ್ನಾಕರ್​ ಹೆಗ್ಡೆ, ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ದಿನಕರ್​ ಶೆಟ್ಟಿ ಹೆರ್ಗ, ನಗರಸಭಾ ಮಾಜಿ ಸದಸ್ಯರಾದ ಗಿರೀಶ್​ ಅಂಚನ್​, ವಿಜಯ ಕೊಡವೂರು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್​ ಇತರರು ನುಡಿನಮನ ಸಲ್ಲಿಸಿದರು.
ಕುಂದಾಪುರ ಶಾಸಕ ಕಿರಣಕುಮಾರ್​ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಕಿರಣಕುಮಾರ್​ ಬೈಲೂರು, ಜ್ಯೋತಿ ಪೂಜಾರಿ, ನಳಿನಿ ಪ್ರದಿಪ್​ ರಾವ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ರಾಜ್ಯ ಎಸ್​ಸಿ ಮೋರ್ಚಾ ಉಪಾಧ್ಯಕ್ಷ ದಿನಕರ್​ ಬಾಬು, ಪ್ರಮುಖರಾದ ಉಷಾ ಶೆಟ್ಟಿ, ದಿನೇಶ್​ ಅಮೀನ್​, ರವಿ ಅಮೀನ್​, ಸತ್ಯಾನಂದ್​ ನಾಯಕ್​, ಶ್ರೀನಿಧಿ ಹೆಗ್ಡೆ, ಶಿವಕುಮಾರ್​ ಅಂಬಲಪಾಡಿ, ಪ್ರಿಯದರ್ಶಿನಿ ದೇವಾಡಿಗ ಇನ್ನಿತರರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಜಯ ಭಟ್​ ಕಡೆಕಾರ್​ ಪ್ರಾರ್ಥಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
"

ಲಕ್ಷ್ಮೀ ಕೊಳ ಅವರು ರಾಜಕೀಯ ಕ್ಷೇತ್ರಕ್ಕಷ್ಟೇ ಸೀಮಿತವಾಗಿರಲಿಲ್ಲ. ಮೀನುಗಾರರ ಸಹಕಾರಿ ಸಂಘದೊಂದಿಗೆ, ಸಾಮಾಜಿಕ, ಧಾರ್ಮಿಕ ಹಾಗೂ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸನಾತನ ಸಂಸ್ಕೃತಿಯ ವಿಚಾರಗಳನ್ನು ಪಸರಿಸುವಲ್ಲಿಯೂ ಕಾರ್ಯೋನ್ಮುಖರಾಗಿದ್ದರು. ತಳಮಟ್ಟದ ಜನರ ಸಂಕಷ್ಟಗಳಿಗೆ ತಕ್ಷಣವೇ ಸ್ಪಂದಿಸುತ್ತಿದ್ದ ಶ್ರೇಷ್ಠ ಜನಸೇವಕಿ ಅವರಾಗಿದ್ದರು.

— ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.