ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ನಲ್ಲಿ ಎನ್ಎಸ್ಎಸ್ ಘಟಕವನ್ನು ಡಾ. ರೇಖಾ ಎನ್. ಚಂದ್ರ ಉದ್ಘಾಟಿಸಿದರು. ಪ್ರೊ.ಡಾ. ಚಂದ್ರಕಾಂತ್ ಭಟ್, ಚಿರಂಜನ್ ಕೆ. ಶೇರಿಗಾರ್, ಡಾ. ಪ್ರಜ್ಞಾ ಮಾರ್ಪಳ್ಳಿ ಇದ್ದರು.
* ಡಾ. ರೇಖಾ ಎನ್. ಚಂದ್ರ ಅನಿಸಿಕೆ
* ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ನಲ್ಲಿ ಘಟಕ ಉದ್ಘಾಟನೆ
ಉಡುಪಿ: ಆತ್ಮಸ್ಥೈರ್ಯದಿಂದ ಏನನ್ನಾದರೂ ಸಾಧಿಸಬಹುದು. ಅದು ನಮ್ಮೊಳಗೆ ಇನ್ನಷ್ಟು ಬೆಳೆಯಲು ಎನ್ಎಸ್ಎಸ್ ಸಮರ್ಥ ವೇದಿಕೆಯಾಗಿದೆ. ಸಾಮಾಜಿಕವಾಗಿ ಗುರುತಿಸಲ್ಪಡುವ ಎಲ್ಲ ಕೆಲಸ, ನಿರ್ವಹಣೆಗಳಲ್ಲಿ ಜವಾಬ್ದಾರಿಯಿಂದ ತೊಡಗಿಸಿಕೊಂಡಾಗ ಮಾತ್ರ ಆತ್ಮಸ್ಥೈರ್ಯ ವೃದ್ಧಿಸಲು ಸಾಧ್ಯ. ಸಾಧಕರಾಗಿ ಸಮಾಜಕ್ಕೆ ಮಾದರಿಯಾಗಲು ಎನ್ಎಸ್ಎಸ್ನ ಸ್ವಯಂಸ್ವೇವಕರಾಗಿ ಎಂದು ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ರೇಖಾ ಎನ್. ಚಂದ್ರ ಕಿವಿಮಾತು ಹೇಳಿದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಮಾತನಾಡಿ, ಎನ್ಎಸ್ಎಸ್ಗೆ ಸೇರಿಕೊಂಡರೆ ಸಾಲದು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುವ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯರಾದಾಗ ಮಾತ್ರ ಮೌಲ್ಯಯುತ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣ ನಿಮ್ಮಂದ ಸಾಧ್ಯ ಎಂದರು.
ಕಾಲೇಜ್ನ ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಚಿರಂಜನ್ ಕೆ. ಶೇರಿಗಾರ್ ಹಾಗೂ ಡಾ. ಪ್ರಜ್ಞಾ ಮಾರ್ಪಳ್ಳಿ ಉಪಸ್ಥಿತರಿದ್ದರು.
ಸ್ವಯಂ ಸೇವಕರಾದ ಸಂಚಿತಾ ಸ್ವಾಗತಿಸಿದರು. ವಾಗೀಶ್ ಭಟ್ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.