ಕುಂದಾಪುರ ಮೂಡ್ಲಕಟ್ಟೆಯ ಐ.ಎಂ.ಜೆ. ಸಂಶೋಧನಾ ಸಂಸ್ಥೆಯಲ್ಲಿರುವ ಕ್ವಾಂಟಮ್ ಕಂಪ್ಯೂಟಿಂಗ್ ಪ್ರಯೋಗಾಲಯ, ಡೆಲ್ಟಾಕ್ಯೂಗೆ ಸಚಿವ ಎನ್.ಎಸ್.ಬೋಸರಾಜು ಭೇಟಿ ನೀಡಿದರು. ಪ್ರಮುಖರಾದ ಮಂಜುನಾಥ್ ಭಂಡಾರಿ, ಜಯಪ್ರಕಾಶ್ ಹೆಗ್ಡೆ, ಶಿವಾನಂದ ಪ್ರಭು ಮೊದಲಾದವರಿದ್ದರು. 
ಉಡುಪಿ

ಸಂಶೋಧನಾ ದೃಷ್ಟಿಕೋನ, ಪ್ರಯತ್ನಕ್ಕೆ ಶ್ಲಾಘನೆ

ಪ್ರಮುಖ ಮುಖ್ಯಾಂಶಗಳು

  • ಎನ್.ಎಸ್.ಬೋಸರಾಜು ಭೇಟಿ
  • ಅಯಾನ್‌ಟ್ರ್ಯಾಪ್ ಆಧಾರಿತ 16 ಕ್ವಿಬಿಟ್ ಕ್ವಾಂಟಮ್ ಪ್ರೊಸೆಸರ್‌ನ ಪ್ರಾಯೋಗಿಕ ವ್ಯವಸ್ಥೆ ವೀಕ್ಷಣೆ
ಕುಂದಾಪುರ: ಮೂಡ್ಲಕಟ್ಟೆಯ ಐ.ಎಂ.ಜೆ. ಸಂಶೋಧನಾ ಸಂಸ್ಥೆಯಲ್ಲಿರುವ ಕ್ವಾಂಟಮ್ ಕಂಪ್ಯೂಟಿಂಗ್ ಪ್ರಯೋಗಾಲಯ, ಡೆಲ್ಟಾಕ್ಯೂಗೆ ಬುಧವಾರ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಭೇಟಿ ನೀಡಿದರು.
ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಅಯಾನ್‌ಟ್ರ್ಯಾಪ್ ಆಧಾರಿತ 16 ಕ್ವಿಬಿಟ್ ಕ್ವಾಂಟಮ್ ಪ್ರೊಸೆಸರ್‌ನ ಪ್ರಾಯೋಗಿಕ ವ್ಯವಸ್ಥೆಯನ್ನು ವೀಕ್ಷಿಸಿದ ಸಚಿವರು, ಸಂಸ್ಥೆಯ ಸಂಶೋಧನಾ ದೃಷ್ಟಿಕೋನ ಮತ್ತು ನಡೆಯುತ್ತಿರುವ ಪ್ರಯತ್ನಗಳನ್ನು ಶ್ಲಾಸಿದರು. ಕರ್ನಾಟಕದಲ್ಲಿ ಜಾಗತಿಕವಾಗಿ ಪ್ರಸ್ತುತವಾದ ಕ್ವಾಂಟಮ್ ತಂತ್ರಜ್ಞಾನ ಕಾರ್ಯಕ್ರಮ ರೂಪಿಸುವ ಸಂಸ್ಥೆಯ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಐ.ಎಂ.ಜೆ. ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಟಿ.ಸತ್ಯಜಿತ್ ಅವರು 2026-2030ರ ಅವಧಿಗೆ ಐ.ಎಂ.ಜೆ ಐ.ಆರ್. ಕ್ವಾಂಟಮ್ ಕಂಪ್ಯೂಟಿಂಗ್ ಕಾರ್ಯಕ್ರಮದ ಕಾರ್ಯ ಯೋಜನೆ ಮಂಡಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ವಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಸ್ಟೆಪ್ಸ್ ಕರ್ನಾಟಕದ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶಕ ಶಿವಾನಂದ ಪ್ರಭು, ಉದ್ಯಮಿ ಮುನಿಯಾಲು ಉದಯ ಕುವಾರ್ ಶೆಟ್ಟಿ, ಐ.ಎಂ.ಜೆ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿದ್ಧಾರ್ಥ ಜೆ.ಶೆಟ್ಟಿ, ಐ.ಎಂ.ಜೆ. ವಿದ್ಯಾಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ.ಎಸ್.ಎನ್.ಭಟ್ ಮತ್ತು ಮೂಡ್ಲಕಟ್ಟೆ ಎಂ.ಐ.ಟಿ. ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ, ಐ.ಎಂ.ಜೆ. ಐಎಸ್‌ಸಿ ಪ್ರಾಂಶುಪಾಲೆ ಡಾ.ಪ್ರತಿಭಾ ಪಟೇಲ್ ಉಪಸ್ಥಿತರಿದ್ದರು.
-----ಫೋಟೋ-----
14ಜಿಎಎನ್2ಎಂಎವೈ
ಕುಂದಾಪುರ ಮೂಡ್ಲಕಟ್ಟೆಯ ಐ.ಎಂ.ಜೆ. ಸಂಶೋಧನಾ ಸಂಸ್ಥೆಯಲ್ಲಿರುವ ಕ್ವಾಂಟಮ್ ಕಂಪ್ಯೂಟಿಂಗ್ ಪ್ರಯೋಗಾಲಯ, ಡೆಲ್ಟಾಕ್ಯೂಗೆ ಸಚಿವ ಎನ್.ಎಸ್.ಬೋಸರಾಜು ಭೇಟಿ ನೀಡಿದರು. ಪ್ರಮುಖರಾದ ಮಂಜುನಾಥ್ ಭಂಡಾರಿ, ಜಯಪ್ರಕಾಶ್ ಹೆಗ್ಡೆ, ಶಿವಾನಂದ ಪ್ರಭು ಮೊದಲಾದವರಿದ್ದರು.